• April 3, 2022

ಅಪ್ಪು ಅಭಿಮಾನಿಗಳಿಗೆ ಯುಗಾದಿ ಶುಭಾಶಯ ಕೋರಿದ ಅಶ್ವಿನಿ

ಅಪ್ಪು ಅಭಿಮಾನಿಗಳಿಗೆ ಯುಗಾದಿ ಶುಭಾಶಯ ಕೋರಿದ ಅಶ್ವಿನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನಗಲಿ ಬರೋಬ್ಬರಿ 5 ತಿಂಗಳುಗಳೇ ಕಳೆದಿವೆ. ಅವರ ನಿಧನದ ನಂತರ ಪತ್ನಿ ಅಶ್ವಿನಿ ಅಪ್ಪು ಮೇಲಿನ ಅಭಿಮಾನಿಗಳಿಗೆ ಇರುವ ವಿಶೇಷ ಅಭಿಮಾನಕ್ಕೆ ಧನ್ಯವಾದ ಸಲ್ಲಿಸಲು ಟ್ವೀಟ್ ಮಾಡಿದ್ದರು. ಅಂದ ಹಾಗೇ ಅಪ್ಪು ಮೇಲೆ ಇಟ್ಟಿರುವ ಪ್ರೀತಿಗೆ ಈ ಬಾರಿಯೂ ಅಶ್ವಿನಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

“ಅಭಿಮಾನಿ ದೇವರುಗಳೇ ನಾನು ನಿಮಗೆ ಆಭಾರಿಯಾಗಿದ್ದೇನೆ” ‌ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಅಶ್ವಿನಿ ಟ್ವೀಟ್ ಮಾಡಿದ್ದಾರೆ.

“ಅಭಿಮಾನಿ ದೇವರುಗಳೇ, ಕಳೆದ ಐದು ತಿಂಗಳುಗಳು, ಅಪ್ಪು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನೀವೆಲ್ಲರೂ ಹೇಗೆ ನಡೆದುಕೊಂಡಿದ್ದೀರಿ. ಅವರ ಹೆಸರಿನಲ್ಲಿ ಮತ್ತು ಗೌರವಾರ್ಥವಾಗಿ ಮಹತ್ತರವಾದ ಕೆಲಸಗಳನ್ನು ಮಾಡಿದ್ದೀರಿ. ಅದಕ್ಕೆಲ್ಲಾ ನಾನು ಗೌರವ ಹಾಗೂ ಅಭಿಮಾನದಿಂದ ಆಭಾರಿಯಾಗಿದ್ದೇನೆ. ಇದೆಲ್ಲವೂ ನನಗೆ ಸಂತೋಷವನ್ನು ನೀಡುವುದು ಮಾತ್ರವಲ್ಲದೆ , ನಿಮ್ಮೊಂದಿಗೆ ಈ ಪಯಣವನ್ನು ಮುಂದುವರೆಸುವ ಭರವಸೆ ಹಾಗೂ ಶಕ್ತಿಯನ್ನು ನೀಡಿದೆ. ಈ ಯುಗಾದಿ ಹಬ್ಬದಂದು, ಭಗವಂತನ ಅನುಗ್ರಹ ಸಂಪೂರ್ಣವಾಗಿ ನಿಮ್ಮೆಲ್ಲರ ಮೇಲಿರಲೆಂದು ಪ್ರಾರ್ಥಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.