• January 4, 2022

ಆಕ್ಷನ್ ಕಟ್ ಹೇಳಲು‌ ಸಜ್ಜಾದ್ರಾ ಅರ್ಜುನ್ ಜನ್ಯ ? ಹೀರೋ ಯಾರು ಗೊತ್ತಾ ?

ಆಕ್ಷನ್ ಕಟ್ ಹೇಳಲು‌ ಸಜ್ಜಾದ್ರಾ ಅರ್ಜುನ್ ಜನ್ಯ ? ಹೀರೋ ಯಾರು ಗೊತ್ತಾ ?

ಸ್ಯಾಂಡಲ್‌ವುಡ್ ಮ್ಯಾಜಿಕಲ್‌ ಮ್ಯೂಸಿಕ್ ಕಂಪೋಸರ್ ಅಂತಾನೇ ಪ್ರಖ್ಯಾತಿ ಗಳಿಸಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೊರಟಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಜೋರಾಗಿದೆ ..

ಹೌದು ಇಷ್ಟು ದಿನಗಳ ಕಾಲ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದ ಅರ್ಜುನ್ ಜನ್ಯ ಈಗ ನಿರ್ದೇಶಕರ ಕ್ಯಾಪ್ ತೊಡಲು ಸಿದ್ಧತೆ ಮಾಡಿಕೊಂಡಿದ್ದಾರಂತೆ…ಈಗೊಂದು ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಹರಿದಾಡುತ್ತಿದೆ ..ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ದರ್ಶನ್ ನಾಯಕರಾಗುತ್ತಾರಂತೆ..

ಅರ್ಜುನ್ ಜನ್ಯ ನಿರ್ದೇಶನ ಸಿನಿಮಾವನ್ನ ಕನ್ನಡದ ನಂಬರ್ ಒನ್ ಆಡಿಯೋ ಸಂಸ್ಥೆಯ ಆನಂದ್ ಆಡಿಯೋ ನಿರ್ಮಾಣ ಮಾಡುತ್ತಿದೆ ..ಒಟ್ಟಾರೆ ಹೀಗೊಂದು ಸುದ್ದಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು ಅರ್ಜುನ್ ಜನ್ಯ ನಿರ್ದೇಶನದ ದರ್ಶನ್ ಅಭಿನಯದ ಸಿನಿಮಾಗೆ ಶಾಂತಿ ಎಂದು ಹೆಸರಿಡಲು ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದ್ಯಂತೆ…ಈ ಸುದ್ದಿ ನಿಜವಾದಲ್ಲಿ ಹರಿಕೃಷ್ಣರಂತೆ..ಅರ್ಜುನ್ ಜನ್ಯ ಕೂಡ ಸಂಗೀತ ನಿರ್ದೇಶನ ಜತೆ ಸಿನಿಮಾ ನಿರ್ದೇಶನವನ್ನು ಆರಂಭ ಮಾಡಲಿದ್ದಾರೆ…