- July 14, 2022
ಟ್ವಿಟರ್ ವಿರುದ್ಧ ಮುನಿಸಿಕೊಂಡ ಅಪ್ಪು ಅಭಿಮಾನಿಗಳು.


ಚಿತ್ರರಂಗ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಹೆಸರು ಮಾಡಿದಂತಹ ‘ಸ್ಟಾರ್’ಗಳನ್ನು ಅವರ ಅಭಿಮಾನಿಗಳಿಗೆ ಹತ್ತಿರುವಾಗಿಸುವ ಸೇತುವೆ ಸೋಶಿಯಲ್ ಮೀಡಿಯಾ. ನಟ-ನಟಿಯರು ತಮ್ಮ ಹೊಸ ಹೊಸ ವಿಚಾರಗಳನ್ನು ಇನ್ಸ್ಟಾಗ್ರಾಮ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇದಕ್ಕಾಗಿಯೇ ‘ಸ್ಟಾರ್’ಗಳಿಗೆ ಅಥವಾ ಗಮನಾರ್ಹ ವ್ಯಕ್ತಿಗಳಿಗೆ, ಅವರನ್ನು ಗುರುತಿಸಲು ಉಳಿದವರಿಗೆ ಸಹಾಯವಾಗುವಂತೆ ‘ಬ್ಲೂ ಟಿಕ್’ ಕೂಡ ನೀಡಲಾಗುತ್ತದೆ. ಅದು ಆಯಾ ಸೆಲೆಬ್ರಿಟಿಗಳದ್ದೇ ಅಧಿಕೃತ ಖಾತೆ ಎಂದು ಈ ಬ್ಲೂ ಟಿಕ್ ಗಳು ಸಾರಿ ಹೇಳುತ್ತವೆ. ಸದ್ಯ ಇದೇ ವಿಷಯಕ್ಕೆ ಸಂಭಂಧಿಸಿದಂತೆ ಅಪ್ಪು ಅಭಿಮಾನಿಗಳು ಟ್ವಿಟರ್ ಮೇಲೆ ಮುನಿಸಿಕೊಂಡಿದ್ದಾರೆ.






ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ವರುಷವೇ ತುಂಬುತ್ತಾ ಬಂತು. ಆದರೂ ಅಭಿಮಾನಿಗಳ ಮನದಲ್ಲಿ ಅವರು ಅಜರಾಮರರಾಗಿ ಉಳಿದುಕೊಂಡಿದ್ದಾರೆ. ಇದೀಗ ಪುನೀತ್ ರಾಜಕುಮಾರ್ ಅವರ ಟ್ವಿಟರ್ ಖಾತೆಯಲ್ಲಿದ್ದ ಬ್ಲೂ ಟಿಕ್ ಅನ್ನು ತೆಗೆಯಲಾಗಿದೆ. ಇದಕ್ಕೆ ಕಾರಣ ಕೂಡ ಇದೆ. ಟ್ವಿಟರ್ ನಲ್ಲಿ ಯಾವುದೇ ‘ಬ್ಲೂ ಟಿಕ್’ ಪಡೆದಿರೋ ಖಾತೆ ಹಲವು ಸಮಯದ ವರೆಗೆ ಬಳಕೆಯಾಗದೆ ಇದ್ದರೆ, ಆ ಬ್ಲೂ ಟಿಕ್ ಅನ್ನು ತೆಗೆಯಲಾಗುತ್ತದೆ. ಸದ್ಯ ಅಪ್ಪು ಅವರ ವಿಷಯದಲ್ಲೂ ಆಗಿರುವುದು ಇದೇ. ಆದರೆ ಇವರಿಗಿಂತ ಹೆಚ್ಚು ಕಾಲ ಬಳಕೆಯಾಗದೆ ಬದಿಗಿಟ್ಟಂತಹ ಹಲವು ಖಾತೆಗಳಿಗೆ ಈ ಬ್ಲೂ ಟಿಕ್ ಅಂಟಿಕೊಂಡೆ ಇರುವ ನಿದರ್ಶನಗಳಿದ್ದು, ಪುನೀತ್ ರಾಜಕುಮಾರ್ ಖಾತೆಯಿಂದ ಬ್ಲೂ ಟಿಕ್ ಅನ್ನು ತೆಗೆದಿರುವುದು ಅಭಿಮಾನಿಗಳಲ್ಲಿ ಆಕ್ರೋಶ ತಂದಿದೆ. ಅಪ್ಪು ಅವರ ಟ್ವಿಟರ್ ಅಕೌಂಟ್ ge ಮರಳಿ ಬ್ಲೂ ಟಿಕ್ ಜೋಡಿಸಬೇಕೆಂದು ಅಭಿಮಾನಿಗಳೆಲ್ಲರೂ ಟ್ವಿಟರ್ ನಲ್ಲಿ ಬೇಡಿಕೆ ಇಡುತ್ತಿದ್ದಾರೆ










