• May 11, 2022

ಒಂದೇ ಸ್ಕ್ರೀನ್ ಮೇಲೆ ಬಾಲಿವುಡ್ ಸ್ಟಾರ್ ನಟರು

ಒಂದೇ ಸ್ಕ್ರೀನ್ ಮೇಲೆ ಬಾಲಿವುಡ್ ಸ್ಟಾರ್ ನಟರು

ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆಯನ್ನು ಭೇಟಿಯಾಗಿದ್ದು ಅವರೊಂದಿಗಿನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂದ ಹಾಗೇ ಅನುಪಮ್ ಖೇರ್ ಅವರು ದೀಪಿಕಾ ಪಡುಕೋಣೆಯನ್ನು ದುಬೈ ಏರ್ ಪೋರ್ಟ್ ನಲ್ಲಿ ಭೇಟಿಯಾಗಿದ್ದಾರೆ.

ದೀಪಿಕಾ ಪಡುಕೋಣೆ ಜೊತೆಗಿನ ಫೋಟೋವನ್ನು ಹಂಚಿಕೊಂಡ ಅನುಪಮ್ ಖೇರ್ “ದುಬೈ ಏರ್ ಪೋರ್ಟ್ ನಲ್ಲಿ ಪ್ರತಿಭಾವಂತ ನಟಿ ದೀಪಿಕಾ ಪಡುಕೋಣೆ ಅವರನ್ನು ಭೇಟಿಯಾದದ್ದು ಖುಷಿಯಾಗಿದೆ. ದೀಪಿಕಾ ಅವರ ಯಶಸ್ಸು ನನಗೆ ದುಪ್ಪಟ್ಟು ಖುಷಿ ತಂದಿದೆ. ಹಾಗೂ ನಟನಾ ಲೋಕದಲ್ಲಿ ಆಕೆ ಸಾಧನೆ ಮಾಡುತ್ತಿರುವುದು ನನಗೆ ಹೆಮ್ಮೆ ತಂದಿದೆ” ಎಂದು ಬರೆದುಕೊಂಡಿದ್ದಾರೆ.

ಓವರ್ ಸೈಜ್ ಸ್ವೆಟರ್ ಹಾಗೂ ಬಿಳಿ ಪ್ಯಾಂಟ್ ಧರಿಸಿ ಸುಂದರವಾಗಿ ಕಾಣುತ್ತಿದ್ದಾರೆ ದೀಪಿಕಾ. ಇತ್ತ ಅನುಪಮ್ ಖೇರ್ ಬಿಳಿ ಶರ್ಟ್ ಧರಿಸಿದ್ಧಾರೆ.

ಇನ್ನು ಬಾಲಿವುಡ್ ಬೆಡಗಿ ದೀಪಿಕಾ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಜ್ಯೂರಿಯಾಗಿ ಭಾಗವಹಿಸಲಿದ್ದು ಭಾರತವನ್ನು ಪ್ರತಿನಿಧಿಸಲಿದ್ದಾರೆ.