• February 16, 2022

ಅನುಪಮಾ ಗೌಡಗೆ ಸಿಕ್ತು ಸರ್ ಪ್ರೈಸ್ ಗಿಫ್ಟ್… ಗಿಫ್ಟ್ ಕೊಟ್ಟ ಸೃಜನ್ ಹೇಳಿದ್ದೇನು ಗೊತ್ತಾ?

ಅನುಪಮಾ ಗೌಡಗೆ ಸಿಕ್ತು ಸರ್ ಪ್ರೈಸ್ ಗಿಫ್ಟ್… ಗಿಫ್ಟ್ ಕೊಟ್ಟ ಸೃಜನ್ ಹೇಳಿದ್ದೇನು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಜನಮೆಚ್ಚುಗೆ ಗಳಿಸಿದ ಶೋ ಹೌದು. ಮಕ್ಕಳ ಮುಗ್ಧತೆ, ಕೀಟಲೆಗಳು ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಿರಿಯ ನಟಿ ತಾರಾ ಅನುರಾಧಾ, ಅನು ಪ್ರಭಾಕರ್ ಹಾಗೂ ಸೃಜನ್ ಲೋಕೇಶ್ ತೀರ್ಪುಗಾರರಾಗಿ ಇರುವ ಈ ಶೋವನ್ನು ಅನುಪಮಾ ಗೌಡ ನಿರೂಪಿಸುತ್ತಿದ್ದಾರೆ.

ನವಿರಾದ ಮಾತಿನ ಜೊತೆಗೆ ಎಲ್ಲರನ್ನೂ ನಗಿಸುವ ಸೃಜನ್ ಲೋಕೇಶ್ ತಾರಾ, ಅನು ಪ್ರಭಾಕರ್ ಹಾಗೂ ಅನುಪಮಾ ಗೌಡ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇನ್ನು ಈ ಬಾರಿ ವಿಶೇಷ ಸಂಚಿಕೆ ಪ್ರಸಾರವಾಗಿದ್ದು ಸೃಜನ್ ಲೋಕೇಶ್ ಮೂವರಿಗೆ ಗಿಫ್ಟ್ ಕೊಟ್ಟಿದ್ದಾರೆ.

ಈ ಬಾರಿ ತಾಯಂದಿರಿಗೆ ಮಕ್ಕಳು ಗಿಫ್ಟ್ ನೀಡುವ ಟಾಸ್ಕ್ ಕೊಡಲಾಗಿತ್ತು. ಈ ಟಾಸ್ಕ್ ನಿಂದ ಸ್ಫೂರ್ತಿ ಪಡೆದ ಸೃಜನ್ ಲೋಕೇಶ್ ಅವರು ಅನು ಪ್ರಭಾಕರ್ ಅವರಿಗೆ ಸರ, ತಾರಾ ಅವರಿಗೆ ಸೀರೆ ನೀಡಿದ್ದಾರೆ. ಇನ್ನು ನಿರೂಪಕಿ ಅನುಪಮಾ ಅವರಿಗೆ ವಿಶೇಷ ಗಿಫ್ಟ್ ಆಗಿ ಮೂಗುತಿ ನೀಡಿರುವ ಸೃಜನ್ ಲೋಕೇಶ್ ” ಜೀವನದಲ್ಲಿ ಅನುಪಮಾ ಅವರು ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ನಾನು ಅನು ಅವರ ಸ್ಟ್ರಗಲ್ ನೋಡಿರುವೆ. ಸಣ್ಣ ವಯಸ್ಸಿನಲ್ಲಿಯೇ ಮನೆಯ ಜವಬ್ದಾರಿ ನೋಡಿಕೊಂಡಿರುವ ಅನುಪಮಾ ಗೌಡ
ತಾಯಿ, ತಂಗಿಯನ್ನು ನೋಡಿಕೊಂಡಿದ್ದಾರೆ. ಇದು ಸಾಮಾನ್ಯವಾದ ಸಂಗತಿಯಲ್ಲ. ಅನುಪಮಾ ಬಗ್ಗೆ ಹೆಮ್ಮೆಯಾಗುತ್ತಿದೆ” ಎಂದು ಹೇಳಿದಾಗ ಅನುಪಮಾ ಭಾವುಕರಾಗಿ ಗಳಗಳನೇ ಅತ್ತರು. ಗಿಫ್ಟ್ ನೋಡಿ ಖುಷಿ ಪಟ್ಟರು.