• February 22, 2022

ಮತ್ತೊಮ್ಮೆ ಸೀಮಂತ ಸಂಭ್ರಮದಲ್ಲಿ ನಟಿ ಅಮೂಲ್ಯ

ಮತ್ತೊಮ್ಮೆ ಸೀಮಂತ ಸಂಭ್ರಮದಲ್ಲಿ ನಟಿ ಅಮೂಲ್ಯ

ನಟಿ ಅಮೂಲ್ಯ ತುಂಬು ತುಂಬು ಗರ್ಭಿಣಿಯಾಗಿದ್ದು ಇನ್ನೂ ಕೆಲವೇ ಕೆಲವು ದಿನಗಳಲ್ಲಿ ತಾಯ್ತನದ ಸಂಭ್ರಮವನ್ನ ಅನುಭವಿಸಲಿದ್ದಾರೆ… ಈಗಾಗಲೇ ಅಮೂಲ್ಯ ಅವರಿಗೆ ಮನೆಮಂದಿಯೆಲ್ಲ ಸೇರಿ ಅದ್ಧೂರಿಯಾದ ಸೀಮಂತ ಕಾರ್ಯಕ್ರಮವನ್ನ ಮಾಡಲಾಯಿತು… ಅದಾದ ನಂತರ ಅಮೂಲ್ಯ ಸ್ನೇಹಿತರಿಂದ ಬೇಬಿ ಶವರ್ ಕಾರ್ಯಕ್ರಮವೂ ಆಯಿತು …

ಪತ್ನಿಗೆ ಸರ್ಪ್ರೈಸ್ ನೀಡಲು ಜಗದೀಶ್ ಚಂದ್ರ ಅವರು ಇಡೀ ಇಂಡಸ್ಟ್ರಿಯ ಕಲಾವಿದರನ್ನೆಲ್ಲ ಕರೆದು ಅದ್ದೂರಿ ಹಾಗೂ ಕಲರ್ ಫುಲ್ಲಾಗಿ ಬೇಬಿ ಶವರ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ರು… ಆದರೆ ಅಮೂಲ್ಯ ಅವರ ಮನೆಯಲ್ಲಿ ಮತ್ತೆ ಸೀಮಂತ ಕಾರ್ಯವನ್ನು ಮಾಡಲಾಗಿದೆ ..

ಹೌದು ಕೋವಿಡ್ ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲಸಮಾಡಿದ ಗರ್ಭಿಣಿಯರಿಗೆ ಜಗದೀಶ್ ಹಾಗೂ ತಂಡ ಮತ್ತು ಅಮೂಲ್ಯ ಅವರು ಸೀಮಂತ ಮಾಡಿ ಪ್ರೋಟಿನ್ ಕಿಟ್ಗಳನ್ನು ವಿತರಣೆ ಮಾಡಿದ್ದರು …ಈಗ ಆ ಗರ್ಭಿಣಿಯರೆಲ್ಲ ತಾಯಂದಿರಾಗಿ ಮುದ್ದು ಮಗುವಿನ ಆರೈಕೆಯಲ್ಲಿದ್ದಾರೆ… ಅದೇ ತಾಯಂದಿರು ಈಗ ಅಮೂಲ್ಯ ಅವರ ಮನೆಗೆ ಬಂದು ಪುಟ್ಟದಾಗಿ ಸುಂದರವಾಗಿ ಸೀಮಂತ ಕಾರ್ಯಕ್ರಮವನ್ನ ಮಾಡಿದ್ದಾರೆ… ಒಟ್ಟಾರೆ ಅಮೂಲ್ಯ ಮಡಿಲು ಸೇರುವ ಮಗುವಿಗೆ ಈಗಲೇ ಎಲ್ಲಾ ಎಲ್ಲರ ಪ್ರೀತಿ ಹಾಗೂ ಕಾಳಜಿ ಸಿಗುತ್ತಿರೋದು ಕಂಡು ಅಮೂಲ್ಯ ಸಖತ್ ಖುಷಿಯಾಗಿದ್ದಾರೆ….