• June 18, 2022

ಮಾಜಿ ಪತ್ನಿಗೆ ಗೆಲುವನ್ನು ಅರ್ಪಿಸಿದ ಅಮೀರ್ ಖಾನ್.. ಯಾಕೆ ಗೊತ್ತಾ?

ಮಾಜಿ ಪತ್ನಿಗೆ ಗೆಲುವನ್ನು ಅರ್ಪಿಸಿದ ಅಮೀರ್ ಖಾನ್.. ಯಾಕೆ ಗೊತ್ತಾ?

ಬಾಲಿವುಡ್ ನಟ ಅಮೀರ್ ಖಾನ್ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಿದ್ದು ಲಗಾನ್ ಸಿನಿಮಾ. ಆ ಸಿನಿಮಾ ಬಿಡುಗಡೆಯಾಗಿ ಇಪ್ಪತ್ತೊಂದು ವರ್ಷ ಕಳೆದಿದೆ. ತನ್ನನ್ನು ಸೂಪರ್ ಸ್ಟಾರ್ ಮಾಡಿರುವ ಈ ಚಿತ್ರ ಇಪ್ಪತ್ತೊಂದು ವರ್ಷ ಪೂರೈಸಿದ ಸಂತಸದಲ್ಲಿರುವ ಅಮೀರ್ ಖಾನ್ ಈ ಗೆಲುವನ್ನು ತನ್ನ ಮಾಜಿ ಪತ್ನಿ ರೀನಾ ದತ್ತ ಅವರಿಗೆ ಅರ್ಪಿಸಿದ್ದಾರೆ.

ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಸದ್ದು ಮಾಡಿರುವ ಲಗಾನ್ ಸಿನಿಮಾ ಅತೀ ಹೆಚ್ಚು ಪ್ರಶಸ್ತಿ ಬಾಚಿಕೊಂಡ ಸಿನಿಮಾ ಎಂದರೆ ತಪ್ಪಾಗಲಾರದು. ಜೂನ್ 15, 2001 ರಂದು ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಈ ಸಿನಿಮಾ ಇಪ್ಪತ್ತೊಂದು ವರ್ಷ ಪೂರೈಸಿದುದಕ್ಕಾಗಿ ಅಮೀರ್ ಖಾನ್ ಮನೆಯಲ್ಲಿ ಇದರ ಸಂಭ್ರಮವನ್ನು ಕೂಡಾ ಚಿತ್ರತಂಡ ಆಚರಿಸಿದೆ.

ಅಶುತೋಷ್ ಗೋವಾರಿಕಲ್ ನಿರ್ದೇಶನದ ಈ ಸಿನಿಮಾದಲ್ಲಿ ಅಮೀರ್ ಖಾನ್ ಹೊರತಾಗಿ ಗ್ರೇಸಿ ಸಿಂಗ್ ಹಾಗೂ ರಾಚೆಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಸಕ್ಸಸ್ ಗೆ ಕಾರಣವಾಗಿದ್ದ ರೀನಾ ದತ್ತರನ್ನು ‌ನೆನಪಿಸಿಕೊಂಡಿರುವ ಅಮೀರ್ ಖಾನ್ “ಲಗಾನ್ ಸಿನಿಮಾದ ಸಮಯದಲ್ಲಿ ರೀನಾ ದತ್ತಾಗೆ ಸಿನಿಮಾ ಬಗ್ಗೆ ಯಾವ ವಿಚಾರಗಳು ತಿಳಿದಿರಲಿಲ್ಲ. ಮುಖ್ಯವಾಗಿ ಅವರಿಗೆ ಸಿನಿಮಾ ರಂಗದ ಬಗ್ಗೆಯೂ ಎಳ್ಳಷ್ಟು ಆಸಕ್ತಿಯಿರಲಿಲ್ಲ. ಆದರೂ ತುಂಬಾ ಅಚ್ಚುಕಟ್ಟಾಗಿ ಲಗಾನ್ ನ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಅದೇ ಕಾರಣಕ್ಕಾಗಿ ನಾನು ಈ ಸಿನಿಮಾದ ಯಶಸ್ಸನ್ನು, ಗೆಲುವನ್ನು ರೀನಾ ದತ್ತಗೆ ಅರ್ಪಿಸುತ್ತೇನೆ” ಎಂದಿದ್ದಾರೆ.