• February 3, 2022

ಕೊಟ್ಟ ಮಾತಿನಂತೆ ನಡೆದುಕೊಂಡ ಪುಷ್ಪ ಸ್ಟಾರ್ ಅಲ್ಲು ಅರ್ಜುನ್

ಕೊಟ್ಟ ಮಾತಿನಂತೆ ನಡೆದುಕೊಂಡ ಪುಷ್ಪ ಸ್ಟಾರ್ ಅಲ್ಲು ಅರ್ಜುನ್

ಪುಷ್ಪಾ ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ನಟ ಅಲ್ಲು ಅರ್ಜುನ್ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ..
ಕಳೆದ ಬಾರಿ ಪುಷ್ಪ ಸಿನಿಮಾದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದಾಗ ನಾನು ಈ ಬಾರಿ ಪುನೀತ್ ಮನೆಗೆ ಭೇಟಿ ನೀಡಲ್ಲ ಎಂದು ನೇರವಾಗಿ ಹೇಳಿದ್ದರು.. ಆದರೆ ಅದೇ ವೇದಿಕೆ ಮೇಲೆ ಮತ್ತೊಂದು ದಿನ ನಾನು ಅಪ್ಪು ಮನೆಗೆ ವಿಸಿಟ್ ಮಾಡಿ ಕುಟುಂಬದೊಡನೆ ಮಾತನಾಡುತ್ತೇನೆ ಎಂದಿದ್ದರು..

ಅದರಂತೆಯೇ ಇದ್ದು ಬೆಂಗಳೂರಿಗೆ ಬಂದು ಮೊದಲಿಗೆ ನಟ ಶಿವರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಕೆಲಕಾಲ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಜೊತೆ ಮಾತನಾಡಿದ್ದಾರೆ…ನಂತರ ಪುನೀತ್ ಮನೆಗೆ ಭೇಟಿಕೊಟ್ಟ ಅಲ್ಲು ಅರ್ಜುನ್ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಮಾತನಾಡಿ ಅಪ್ಪು ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದಾರೆ ..

ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ್ದಾರೆ… ಅದರೊಟ್ಟಿಗೆ ಅಲ್ಲೆ ಇರುವ ಅಂಬಿ ಸಮಾಧಿ ಹಾಗೂ ಡಾಕ್ಟರ್ ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಿದ್ದಾರೆ ಅಲ್ಲು ಅರ್ಜುನ್ ‌..