• April 26, 2022

ಒಂದಳ್ಳೆ ಆಫರ್ ಗೆ ನೋ ಎಂದ ಅಲ್ಲು ಅರ್ಜುನ್

ಒಂದಳ್ಳೆ ಆಫರ್ ಗೆ ನೋ ಎಂದ ಅಲ್ಲು ಅರ್ಜುನ್

ಪುಷ್ಪ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಟ ಅಲ್ಲು ಅರ್ಜುನ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲಿಯೂ ಅವರಿಗೆ ಬೇಡಿಕೆ ಹೆಚ್ಚಿದ್ದು ಸಿನಿಮಾ ಮಾತ್ರವಲ್ಲ ಜಾಹೀರಾತು ಕಂಪೆನಿಗಳು ಕೂಡಾ ಅವರ ಹಿಂದೆ ಬಿದ್ದಿವೆ. ಆದರೆ ಅರ್ಜುನ್ ಸಿನಿಮಾ ಹಾಗೂ ಜಾಹೀರಾತುಗಳನ್ನು ಆಯ್ಕೆ ಮಾಡುವಾಗ ಜಾಗರೂಕತೆ ವಹಿಸುತ್ತಾರೆ. ಇತ್ತೀಚೆಗೆ ತಂಬಾಕು ಜಾಹೀರಾತಿನಲ್ಲಿ ನಟಿಸಲು ನಿರಾಕರಿಸಿ ಸುದ್ದಿಯಾಗಿದ್ದಾರೆ.

ಖ್ಯಾತ ನಟ ಅಲ್ಲು ಅರ್ಜುನ್ ಅವರಿಗೆ ತಂಬಾಕು ಕಂಪೆನಿಯೊಂದು ದೊಡ್ಡ ಆಫರ್ ನೀಡಿತ್ತು. ಆದರೆ ಆತ ಜಾಹೀರಾತಿಗೆ ಅರ್ಜುನ್ ನೋ ಎಂದಿದ್ದಾರೆ. ಹಣ ಸಿಗುತ್ತದೆ ಎಂಬ ಕಾರಣಕ್ಕೆ ಅಭಿಮಾನಿಗಳನ್ನು ದಾರಿ ತಪ್ಪಿಸಬಾರದು ಎಂಬ ಉದ್ದೇಶದಿಂದ ಅವರು ಈ ಆಫರ್ ನನ್ನು ತಿರಸ್ಕರಿಸಿದ್ದಾರೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಆಗಿದೆ‌. ಇಂತಹ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎನ್ನುವ ಕಾರಣಕ್ಕಾಗಿ ಅಲ್ಲು ಅರ್ಜುನ್ ಈ ಜಾಹೀರಾತಿನಲ್ಲಿ ನಟಿಸಲು ಒಪ್ಪಿಗೆ ನೀಡಿಲ್ಲ.

ಇಂದು ಅನೇಕ ಸ್ಟಾರ್ ನಟರು ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಇದಕ್ಕೆ ನಿರಾಕರಿಸುವ ಮೂಲಕ ತಾನೊಬ್ಬ ಜವಾಬ್ದಾರಿಯುತ ನಟ ಎಂಬುದನ್ನು ನಿರೂಪಿಸಿದ್ದಾರೆ. ಅಲ್ಲು ಅರ್ಜುನ್ ಕೂಡಾ ತಂಬಾಕು ಸೇವಿಸುವುದಿಲ್ಲ. ಹೀಗಾಗಿ ಅಭಿಮಾನಿಗಳಿಗೂಉ ಸ್ಪೂರ್ತಿ ನೀಡಲು ಇಷ್ಟ ಪಡುವುದಿಲ್ಲ.

ಇನ್ನು ಈ ಹಿಂದೆ ನಟಿ ಸಾಯಿ ಪಲ್ಲವಿ ಕೂಡಾ ಕ್ರೀಂ ಜಾಹೀರಾತಿನಲ್ಲಿ ನಟಿಸಲು ತಿರಸ್ಕರಿಸಿ ಸುದ್ದಿಯಾಗಿದ್ದರು.