• December 11, 2021

ಪುಷ್ಪ ತಂಡಕ್ಕೆ ಸ್ಟೈಲಿಷ್ ಸ್ಟಾರ್ ನಿಂದ ಸಿಕ್ತು ಭರ್ಜರಿ ಗಿಫ್ಟ್

ಪುಷ್ಪ ತಂಡಕ್ಕೆ ಸ್ಟೈಲಿಷ್ ಸ್ಟಾರ್ ನಿಂದ ಸಿಕ್ತು ಭರ್ಜರಿ ಗಿಫ್ಟ್

ಬಹು ನೀರಿಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ʻಪುಷ್ಪʼ ಭಾರಿ ನಿರೀಕ್ಷೆಯೊಂದಿಗೆ ಮುಂದಿನ ವಾರ (ಡಿ.17) ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಇದರಿಂದ ಖುಷಿಯಾಗಿರೋ ಚಿತ್ರದ ನಾಯಕ ನಟ ಸ್ಟೈಲಿಷ್ ಸ್ಟಾರ್‌ ಅಲ್ಲು ಅರ್ಜುನ್‌ ಚಿತ್ರದ ಕೋರ್‌ ಟೀಂನಲ್ಲಿದ್ದ 40 ಜನರಿಗೆ ಭರ್ಜರಿ ಬಹುಮಾನ ಕೊಟ್ಟಿದ್ದಾರೆ…

ಹೌದು ಅಲ್ಲು ಅರ್ಜುನ್ ಚಿತ್ರತಂಡದ ಜೊತೆ ಕೆಲಸ ಮಾಡಿ ಖುಷಿಯಾಗಿರೋ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೂ ತಲಾ ಒಂದು ತೊಲೆ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಇದೇ ವೇಳೆ ಚಿತ್ರದ ಪ್ರೊಡಕ್ಷನ್‌ ತಂಡದಲ್ಲಿ ಕೆಲಸ ಮಾಡಿದವರಿಗೆ ಒಟ್ಟು 10 ಲಕ್ಷ ರೂಪಾಯಿಗಳನ್ನು ನೀಡಿ ಚಿತ್ರದ ಶೂಟಿಂಗ್‌ಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಫಾಹದ್ ಫಾಸಿಲ್, ಸುನೀಲ್‌, ಅನಸೂಯ, ಜಗಪತಿ ಬಾಬು, ಪ್ರಕಾಶ್‌ ರಾಜ್‌ ಸೇರಿದಂತೆ ಭಾರಿ ತಾರಾಗಣವಿದೆ. ಐಟಂ ಸಾಂಗ್‌ನಲ್ಲಿ ಸಮಂತಾ ಅಭಿನಯಿಸಿದ್ದು ಇದು ಚಿತ್ರದ ಸ್ಪೆಷಲ್‌ ಅಟ್ರ್ಯಾಕ್ಷನ್‌ ಆಗಿದೆ. ಪುಷ್ಪ’ ಡಿಸೆಂಬರ್ 17 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರಲಿದೆ…

ಪುಷ್ಪ ತಂಡ ಹಗಲು ರಾತ್ರಿ ಎನ್ನದೆ ಕಾಡು ಮೇಡು ಅಲೆದು ಶೂಟಿಂಗ್ ಕೆಲಸ ಮಾಡಿದೆ ..ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕೆಂದು ಅಲ್ಲು ಅರ್ಜುನ್ ಸಿನಿಮಾ ಬಿಡುಗಡೆಗೂ ಈ ಬಂಪರ್ ಬಹುಮಾನ ನೀಡಿದ್ದಾರೆ…