• February 11, 2022

ಬಾಲಿವುಡ್ ಬೆಡಗಿಗೆ ಸ್ಟೈಲಿಶ್ ಸ್ಟಾರ್ ಜೊತೆಗೆ ನಟಿಸುವ ಬಯಕೆ!

ಬಾಲಿವುಡ್ ಬೆಡಗಿಗೆ ಸ್ಟೈಲಿಶ್ ಸ್ಟಾರ್ ಜೊತೆಗೆ ನಟಿಸುವ ಬಯಕೆ!

ಅಲಿಯಾ ಭಟ್‌.. ಬಾಲಿವುಡ್ ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಎನಿಸಿಕೊಂಡಿರುವ ಅಲಿಯಾ ಭಟ್ ತನ್ನ ಮನೋಜ್ಞ ಅಭಿನಯದಿಂದ ಮನಸೆಳೆದವರು. ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರದಿಂದ ಕೆರಿಯರ್ ಆರಂಭಿಸಿದ ಅಲಿಯಾ ಭಟ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಬಾಲಿವುಡ್ ನ ಜನಪ್ರಿಯ ನಟರೊಂದಿಗೆ ನಟಿಸಿರುವ ಅಲಿಯಾ ಭಟ್ ಗೆ ಇದೀಗ ಮತ್ತೋರ್ವ ಮಹಾನ್ ನಟನೊಂದಿಗೆ ತೆರೆ ಹಂಚಿಕೊಳ್ಳುವ ಮಹಾದಾಸೆ!

ಹೌದು, ಅಲಿಯಾ ಭಟ್ ಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ನಟಿಸುವ ಬಯಕೆ ಇದೆ. ಪುಷ್ಪ ಮೂಲಕ ಬಣ್ಣದ ಜಗತ್ತಿನಲ್ಲಿ ಹೊಸ ಹವಾ ಎಬ್ಬಿಸಿರುವ ಅಲ್ಲು ಅರ್ಜುನ್ ಜೊತೆ ನಟಿಸಬೇಕು ಎಂಬುದು ಅಲಿಯಾ ಆಸೆ. ಇನ್ನು ಪುಷ್ಪ ಸಿನಿಮಾ ನೋಡಿದ ಅಲಿಯಾ ಭಟ್ ಮನೆಯವರು ಕೂಡಾ “ನೀನು ಯಾವಾಗ ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡುತ್ತೀಯಾ? ಎಂದು ಅಲಿಯಾ ಬಳಿ ಕೇಳುತ್ತಿದ್ದಾರೆ.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡುವ ಬಯಕೆ ಮಾಮೂಲಿಯಾಗಿ ಎಲ್ಲಾ ಹೀರೋಯಿನ್ ಗಳಿಗೂ ಇದ್ದೇ ಇದೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್, ಬ್ರಹ್ಮಾಸ್ತ್ರ, ಗಂಗೂಬಾಯಿ ಕಠಿಯಾವಾಡಿ ಚಿತ್ರದಲ್ಲಿ ನಟಿಸಿರುವ ಅಲಿಯಾ ಮುಂದೆ ಅಲ್ಲು ಅರ್ಜುನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡರೂ ಅಚ್ಚರಿ ಏನಿಲ್ಲ.