- May 17, 2022
ಅಕ್ಷಯ್ ಕುಮಾರ್ ಗೆ ಮತ್ತೊಮ್ಮೆ ಕೊರೊನಾ ಪಾಸಿಟಿವ್


ನಟ ಅಕ್ಷಯ್ ಕುಮಾರ್ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು ತನಗೆ ಕೋವಿಡ್ ತಗುಲಿರುವ ಬಗ್ಗೆ ತಿಳಿಸಿದ್ದಾರೆ. ಟ್ವೀಟ್ ನಲ್ಲಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ವಿಚಾರವನ್ನು ಹೇಳಿದ್ದಾರೆ.


” ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಮ್ಮ ಸಿನಿಮಾವನ್ನು ಬೇರೂರಿಸಲು ಎದುರು ನೋಡುತ್ತಿದ್ದೆ. ಆದರೆ ಕೋವಿಡ್ ಪಾಸಿಟಿವ್ ಬಂದಿದೆ. ವಿಶ್ರಾಂತಿ ಮಾಡಬೇಕಿದೆ. ಅನುರಾಗ್ ಠಾಕೂರ್ ಅವರೇ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಆಲ್ ದಿ ಬೆಸ್ಟ್ “ಎಂದು ಟ್ವೀಟ್ ಮಾಡಿದ್ದಾರೆ.


ಅಕ್ಷಯ್ ಕುಮಾರ್ ಅವರು ಬಿಎಂಸಿ ಅವರ ಕೋವಿಡ್ ರೋಗಿಗಳ ಪಟ್ಟಿಗೆ ಇನ್ನೂ ಸೇರ್ಪಡೆ ಆಗಿಲ್ಲ. ಏಕೆಂದರೆ ಅವರು ಮನೆಯಲ್ಲಿ ಪರೀಕ್ಷೆ ಮಾಡಿಕೊಂಡಿದ್ದಾರೆ. ಅಕ್ಷಯ್ ಅವರು ಕೋವಿಡ್ ಪಾಸಿಟಿವ್ ಎಂದು ಗುರುತಿಸಲು ಅಧಿಕೃತ ಅಪ್ಲಿಕೇಶನ್ ಬಳಸಬೇಕು. ನಂತರ ಏಳು ದಿನಗಳ ಕಾಲ ಕ್ವಾರಂಟೈನ್ ಮಾಡಬೇಕು. ಇದು ಈಗಿನ ವಿಧಾನ ಎಂದು ಬಿಎಂಸಿ ಹೇಳಿದೆ.


ರಾಧಿಕಾ ಮದನ್ ಜೊತೆ ನಟಿಸುತ್ತಿರುವ ಅಕ್ಷಯ್ ಕುಮಾರ್ ಅವರ ಶೂಟಿಂಗ್ ಮಾಡಬೇಕಿತ್ತು. ಆದರೆ ಕೋವಿಡ್ ನಿಂದಾಗಿ ಇದು ಪೋಸ್ಟ್ ಪೋನ್ ಆಗಿದೆ. ಅಕ್ಷಯ್ ಕುಮಾರ್ ಅವರಿಗೆ ಕೋವಿಡ್ ತಗುಲಿರುವುದು ಇದೇ ಮೊದಲೇನಲ್ಲ. ಏಪ್ರಿಲ್ 2021ರಲ್ಲಿಯೂ ಕೋವಿಡ್ ಗೆ ತುತ್ತಾಗಿದ್ದರು.




