• January 13, 2022

ಪ್ರೇಕ್ಷಕರ ಮುಂದೆ ಬರಲು ಶೋಕಿವಾಲ ರೆಡಿ

ಪ್ರೇಕ್ಷಕರ ಮುಂದೆ ಬರಲು ಶೋಕಿವಾಲ ರೆಡಿ

ಕೃಷ್ಣ ಅಜಯ್ ರಾವ್ ಅಭಿನಯದ ಶೋಕಿವಾಲ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ…ಚಿತ್ರ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಪಡೆದು ಪಾಸ್ ಅಗಿದ್ದು… ಜನರ ಮುಂದೆ ಬಂದು ಗೆಲ್ಲುವುದಷ್ಟೇ ಬಾಕಿ ಉಳಿದಿದೆ…. ಜನವರಿಯಲ್ಲಿ ಚಿತ್ರ ಬರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಚಿತ್ರತಂಡ ತಿಳಿಸಿತ್ತು ಆದರೆ ಈಗ ಕೋವಿಡ್ ಕಾರಣದಿಂದ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಬಹುದು…

ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು . ಅಜಯ್ ರಾವ್, ಸಂಜನಾ ಆನಂದ್, ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್ ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನ ಕಲಾವಿದರು ನಟಿಸಿದ್ದಾರೆ. ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿ ಯತಂಹ ಹಳ್ಳಿಗಳಲ್ಲಿ ಶೂಟಿಂಗ್ ಮಾಡಲಾಗಿದೆ….

ಶ್ರೀಧರ್. ವಿ. ಸಂಭ್ರಮ್ ರವರ ಸಂಗೀತವಿದ್ದು, ಚಿತ್ರದಲ್ಲಿನ 4 ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ….ನವೀನ್ ಕುಮಾರ್.ಎಸ್ ಚಿತ್ರಕ್ಕೆ ಕ್ಯಾಮೆರಾಮೆನ್,ಕೆ.ಎಂ. ಪ್ರಕಾಶ್ ಎಡಿಟರ್ , ಪ್ರಶಾಂತ್ ರಾಜಪ್ಪ ಸಂಭಾಷಣೆ
ಮೋಹನ್ ನೃತ್ಯ,
ವಿಕ್ರಮ್ ಮೋರ್ ಸಾಹಸ,
ಮೈಸೂರು ರಘು ರವರ ಕಲಾ ನಿರ್ದೇಶನ ಮಾಡಿದ್ದಾರೆ
..ಸೆನ್ಸಾರ್ ನಿಂದ ಸರ್ಟಿಫಿಕೇಟ್ ಪಡೆದಿರೋ ಸಿನಿಮಾ ಕೆಲವೇ ದಿನಗಳಲ್ಲಿ ಬಿಗ್ ಸ್ಕ್ರೀನ್ ಮೇಲೆ ಬರಲಿದೆ….