• April 21, 2022

ಸಿನಿಮಾ ಕಡೆಗೆ ಮರಳಲಿದ್ದಾರಾ ಐಶ್ವರ್ಯ ರಜನಿಕಾಂತ್

ಸಿನಿಮಾ ಕಡೆಗೆ ಮರಳಲಿದ್ದಾರಾ ಐಶ್ವರ್ಯ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನೀಕಾಂತ್ ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಹಿಂದಿ ಸಿನಿಮಾ ನಿರ್ದೇಶನ ಮಾಡಲು ಅವರಿಗೆ ಆಫರ್ಸ್ ಬರುತ್ತಿರುವ ಬಗ್ಗೆ ಮಾತನಾಡಿದ್ದಾರೆ.

“ನನಗೆ ಹಿಂದಿ ಸಿನಿಮಾ ನಿರ್ದೇಶನ ಮಾಡುವ ಆಫರ್ಸ್ ಬರುತ್ತಲೇ ಇದ್ದವು.ಬಆದರೆ ನಾನು ಆಗ ಕೆಲಸ ಮಾಡುವ ಮನಸ್ಥಿತಿಯಲ್ಲಿ ಇರಲಿಲ್ಲ” ಎಂದಿರುವ ಐಶ್ವರ್ಯಗೆ ಭವಿಷ್ಯದಲ್ಲಿ ಹೃತಿಕ್ ರೋಷನ್ ಹಾಗೂ ರಣವೀರ್ ಸಿಂಗ್ ಅವರೊಂದಿಗೆ ಕೆಲಸ ಮಾಡಲು ಮನಸ್ಸಿದೆ.

ಐಶ್ವರ್ಯ ಅವರ ಸಿನಿಮಾದಲ್ಲಿ ರಜನಿಕಾಂತ್ ನಟಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಐಶ್ವರ್ಯ ಈ ವಿಚಾರ ಅವರು ಯೋಚಿಸಿಯೇ ಇಲ್ಲ. ಐಶ್ವರ್ಯ ಅವರು ರಜನಿಕಾಂತ್ ಅವರ ಅಭಿಮಾನಿಯಾಗಿ ಎಂಜಾಯ್ ಮಾಡುತ್ತಾರೆ .ಆದರೆ ಅಕಸ್ಮಾತ್ತಾಗಿ ಒಂದು ವೇಳೆ ಅವಕಾಶ ಬಂದರೆ ಅದನ್ನು ಬಳಸಿಕೊಳ್ಳುತ್ತೇನೆ ಎಂದಿದ್ದಾರೆ.

ಸದ್ಯ ಪ್ಯಾನ್ ಇಂಡಿಯಾ ಸಿನಿಮಾದ ಟ್ರೆಂಡ್ ಕುರಿತು ಮಾತನಾಡಿರುವ ಐಶ್ವರ್ಯ “ಭಾರತೀಯ ಸಿನಿಮಾ ವಿಕಸನಗೊಂಡಿದೆ. ಇದಕ್ಕೆ ಪ್ರೇಕ್ಷಕರು ಮುಖ್ಯ ಕಾರಣ. ಅವರು ನಿರ್ದೇಶಕರಿಗೆ ಯೋಚಿಸುವ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಹೊಸ ಹಾಗೂ ವಿವಿಧ ರೀತಿಯ ಕಂಟೆಂಟ್ ಗಳಿಗೆ ಪ್ರೋತ್ಸಾಹ ನೀಡುತ್ತಾರೆ” ಎನ್ನುತ್ತಾರೆ ಐಶ್ವರ್ಯ.