• March 6, 2022

ವಿಶ್ವಸುಂದರಿಯ ಸೌಂದರ್ಯದ ಗುಟ್ಟು ಇದೇ ನೋಡಿ

ವಿಶ್ವಸುಂದರಿಯ ಸೌಂದರ್ಯದ ಗುಟ್ಟು ಇದೇ ನೋಡಿ

ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ನಟಿಸಿ ಮನೆಮಾತಾಗಿರುವ ಐಶ್ವರ್ಯ ರೈ ನಟನೆಯಲ್ಲಿ ಮಾತ್ರವಲ್ಲದೇ ಸುರಸುಂದರಿಯೂ ಹೌದು. 1994ರಲ್ಲಿ ವಿಶ್ವಸುಂದರಿ ಪಟ್ಟ ಗಿಟ್ಟಿಸಿಕೊಂಡ ಐಶ್ವರ್ಯ 1997ರಲ್ಲಿ ತಮಿಳು ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದರು. 2007ರಲ್ಲಿ ನಟ ಅಭಿಷೇಕ್ ಬಚ್ಚನ್ ಅವರನ್ನು ವರಿಸಿದ ಐಶ್ವರ್ಯ ರೈ ಅವರಿಗೆ ಆರಾಧ್ಯ ಎಂಬ ಮಗಳಿದ್ದಾಳೆ.

48 ವಯಸ್ಸಿನ ಐಶ್ವರ್ಯ ರೈ ತಮ್ಮ ಮಾದಕ ಚೆಲುವಿನಿಂದ ಗಮನ ಸೆಳೆಯುವುದಂತೂ ನಿಜ. ತಮ್ಮ ಮನಮೋಹಕ ನೋಟ ಹಾಗೂ ಕಾಂತೀಯ ಕಣ್ಣುಗಳಿಗಾಗಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಹಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುತ್ತಿದ್ದು, ಒಂದಷ್ಟು ಟಿಪ್ಸ್ ಗಳನ್ನು ಕೂಡಾ ಹೇಳಿದ್ದಾರೆ.

ಐಶ್ವರ್ಯ ರೈ ಕಡಲೆ ಹಿಟ್ಟು , ಅರಿಶಿನ ಹಾಗೂ ಹಾಲಿನೊಂದಿಗೆ ಪೇಸ್ಟ್ ತಯಾರಿಸಿ ಫೇಸ್ ಪ್ಯಾಕ್ ಆಗಿ ಮುಖಕ್ಕೆ ಬಳಸುತ್ತಾರೆ.ಇದರ ಜೊತೆಗೆ ಚರ್ಮವನ್ನು ತೇವಗೊಳಿಸಲು ಮೊಸರನ್ನು ಕೂಡಾ ಉಪಯೋಗಿಸುತ್ತಾರೆ.

ತಮ್ಮ ಮುಖಕ್ಕೆ ಸೌತೆಕಾಯಿ ರಸವನ್ನು ಬಳಸುತ್ತಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಐಶ್ವರ್ಯ ರೈ. ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ತಾನು ಫಾಲೋ ಮಾಡುವ ಸೌಂದರ್ಯ ವಿಧಾನಗಳಲ್ಲಿ ಒಂದಾಗಿದೆ ಎನ್ನುವ ಐಶ್ವರ್ಯ ರೈ ಸಾಕಷ್ಟು ನೀರು ಕುಡಿಯುತ್ತಾರೆ.

ಮನೆಯಲ್ಲಿ ತಯಾರಿಸಿದ ಆಹಾರವನ್ನು ಇಷ್ಟಪಡುವ ವಿಶ್ವಸುಂದರಿ ಸರಿಯಾದ ಪೋಷಣೆ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ತಿಳಿದುಕೊಂಡಿದ್ದಾರೆ.

ಸಂತೋಷವಾಗಿರುವುದು ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಐಶ್ವರ್ಯ ರೈ ಸದಾ ಸಂತೋಷವಾಗಿರಲು ಪ್ರಯತ್ನಿಸುತ್ತಾರೆ.