• April 28, 2022

ಸ್ಟುಡಿಯೋ ಫೋಟೋ ಹಂಚಿಕೊಂಡ ಯಾಮಿ ಗೌತಮ್

ಸ್ಟುಡಿಯೋ ಫೋಟೋ ಹಂಚಿಕೊಂಡ ಯಾಮಿ ಗೌತಮ್

ಬಾಲಿವುಡ್ ನ ಪ್ರತಿಭಾವಂತ ನಟಿಯರಲ್ಲಿ ಯಾಮಿ ಗೌತಮ್ ಕೂಡಾ ಒಬ್ಬರು. ಇತ್ತೀಚೆಗೆ ರಿಲೀಸ್ ಆಗಿರುವ ಅವರ ದಾಸ್ವಿ ಸಿನಿಮಾದ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ. ಇದರ ಜೊತೆಗೆ ತಮ್ಮ ಮೊದಲ ಬಾಲಿವುಡ್ ಸಿನಿಮಾ ” ವಿಕ್ಕಿ ಡೋನರ್” ಸಿನಿಮಾ ರಿಲೀಸ್ ಆಗಿ ದಶಕಗಳು ತುಂಬಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

ಆಯುಷ್ಮಾನ್ ಖುರಾನಾ ನಾಯಕರಾಗಿ ನಟಿಸಿದ್ದ ಈ ಚಿತ್ರವನ್ನು ಶೂಜಿತ್ ಸರ್ಕಾರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಹತ್ತನೇ ವರ್ಷದಂದು ಯಾಮಿ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ವಿಕ್ಕಿ ಡೋನರ್ ಸಿನಿಮಾಕ್ಕೆ ಆಡಿಷನ್ ನೀಡಿದ್ದ ಸ್ಟುಡಿಯೋಗೆ ಇತ್ತೀಚಿಗೆ ಯಾಮಿ ಹೋಗಿದ್ದರು. ಆ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

“ಎಲ್ಲಾ ಪ್ರಾರಂಭವಾದ ಸ್ಥಳ. ಇಲ್ಲಿ ವಿಕ್ಕಿ ಡೋನರ್ ಸಿನಿಮಾಕ್ಕೆ ಆಡಿಷನ್ ನೀಡುವ ಮೂಲಕ ನನ್ನ ಪಯಣ ಆರಂಭಿಸಿದೆ. ಈ ಸ್ಟುಡಿಯೋಗೆ ಇತ್ತೀಚಿನ ಭೇಟಿಯು ನನ್ನನ್ನು ನೆನಪಿನ ಹಾದಿಗೆ ಕೊಂಡೊಯ್ಯಿತು. ಈ ಪಯಣದ ಸುಂದರ ಕ್ಷಣಗಳು ನೆಮ್ಮದಿ ನೀಡಿತು. ಶೂಜಿತ್ ಸರ್ ಹಾಗೂ ತಂಡಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ವಿಕ್ಕಿ ಡೋನರ್ ಸಿನಿಮಾಕ್ಕೆ ಆಯುಷ್ಮಾನ್ ಖುರಾನಾ ಹಾಗೂ ಯಾಮಿ ತಮ್ಮ ನಟನೆಗೆ ಪ್ರಶಂಸೆ ಪಡೆದಿದ್ದರು. ಸದ್ಯ ಅಭಿಷೇಕ್ ಬಚ್ಚನ್ ಜೊತೆ ನಟಿಸಿದ ದಾಸ್ವಿ ಸಿನಿಮಾ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಿದೆ.