• April 18, 2022

ವಿಭಿನ್ನ ಪಾತ್ರದ ಮೂಲಕ ರಂಜಿಸಲು ಬರುತ್ತಿದ್ದಾರೆ ತಾರಾ

ವಿಭಿನ್ನ ಪಾತ್ರದ ಮೂಲಕ ರಂಜಿಸಲು ಬರುತ್ತಿದ್ದಾರೆ ತಾರಾ

ನಟ ಸುಜಯ್ ಶಾಸ್ತ್ರಿ ಎಲ್ಲರ ಕಾಲೆಳೆಯುತ್ತೆ ಕಾಲ ಎಂಬ ಎರಡನೇ ಸಿನಿಮಾ ಮಾಡುತ್ತಿದ್ದಾರೆ. 80ರ ದಶಕದಲ್ಲಿನ ಕಥೆ ಹೊಂದಿರುವ ಈ ಸಿನಿಮಾದ ಮೂಲಕ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ನಟನೆಗೆ ಕಾಲಿಡುತ್ತಿದ್ದಾರೆ. ಈಗ ಈ ಸಿನಿಮಾ ತಂಡದಿಂದ ಇನ್ನೊಂದು ಹೊಸ ಸುದ್ದಿ ಬಂದಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಈ ಸಿನಿಮಾ ಬಳಗ ಸೇರಿಕೊಂಡಿದ್ದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

“ತಾರಮ್ಮ ಈ ಸಿನಿಮಾದಲ್ಲಿ ರಿಂದವ್ವ ಪಾತ್ರ ಮಾಡುತ್ತಿದ್ದಾರೆ. ಚಮತ್ಕಾರ ಹಾಗೂ ಸ್ವಲ್ಪ ಅತೀಂದ್ರಿಯ ವ್ಯಕ್ತಿ ಆಗಿದ್ದು, ಅವರ ತತ್ವವು ಸಂತ ಶಿಶುನಾಳ ಶರೀಫರಂತೆ ಇರುತ್ತದೆ. ಅವರ ಲುಕ್ ಈ ಚಿತ್ರದ ಕಥೆಯಲ್ಲಿ ಪ್ರಭಾವ ಬೀರುತ್ತದೆ. ಅವರು ಈ ಪಾತ್ರ ಒಪ್ಪಿಕೊಂಡಿರುವುದಕ್ಕೆ ನನಗೆ ಖುಷಿ ತಂದಿದೆ. ಅವರು ಈಗಾಗಲೇ ಶೂಟಿಂಗ್ ಮುಗಿಸಿದ್ದಾರೆ” ಎಂದಿದ್ದಾರೆ ಸುಜಯ್ ಶಾಸ್ತ್ರಿ.

ಇತ್ತೀಚೆಗೆ ತಾರಾ ಅವರ ಲುಕ್ ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಹಾಗೂ ಈ ಸಿನಿಮಾದಲ್ಲಿ ಭಾಗವಾಗಿರುವುದಕ್ಕೆ ಧನ್ಯವಾದಗಳನ್ನು ಹೇಳಿದ್ದರು. “ಮೊದಲನೆ ದಿನ ನಾನು ನಿಮಗೆ ಕಥೆ ಹೇಳಿದಾಗ ತುಂಬಾ ಪ್ರೀತಿ ತೋರಿಸಿದ್ದೀರಿ. ಕ್ಯಾಮೆರಾ ಎದುರು ಬಂದಾಗಲೂ ಅದೇ ಪ್ರೀತಿ ತೋರಿಸಿದ್ದೀರಿ. ನಿಮ್ಮ ಪಾತ್ರವನ್ನು ಪರಿಚಯ ಮಾಡಲು ಬಯಸುತ್ತೇನೆ. ಧನ್ಯವಾದಗಳು” ಎಂದಿದ್ದಾರೆ.

ಸದ್ಯ ಚಿತ್ರದ ಶೂಟಿಂಗ್ ಕನಕಪುರದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಅರ್ಚನಾ ಕೊಟ್ಟಿಗೆ ಕೂಡಾ ನಟಿಸುತ್ತಿದ್ದಾರೆ.