- April 23, 2022
ಲೀಲಾ ಪಾತ್ರದ ಭಾವನಾತ್ಮಕತೆ ನನ್ನಲ್ಲಿ ಸದಾ ಉಳಿಯುತ್ತದೆ – ಸಪ್ತಮಿ ಗೌಡ


ನಟಿ ಸಪ್ತಮಿ ಗೌಡ ಕಾಂತಾರ ಚಿತ್ರದ ಮೂರು ತಿಂಗಳು ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳಿದ್ದಾರೆ. ಆದರೆ ಅವರಿನ್ನೂ ರಿಯಾಲಿಟಿಗೆ ಮರಳಿಲ್ಲವಂತೆ. “ಚಿತ್ರದ ಶೂಟಿಂಗ್ ಅನುಭವ ಎಷ್ಟು ಅಗಾಧವಾಗಿತ್ತು. ಕರಾವಳಿಯ ಹಳ್ಳಿಯ ವಿಶಿಷ್ಟವಾದ ಸೂಕ್ಷ್ಮ ಅಂಶಗಳನ್ನು ತರಲು ಇಡೀ ಗ್ರಾಮವನ್ನು ಮರು ಸೃಷ್ಟಿಸಲಾಗಿದೆ. ಕುಂದಾಪುರದ ಕಾಡಿನ ಗಡಿಯಲ್ಲಿರುವ ಕುಗ್ರಾಮದಲ್ಲಿ ಇದನ್ನು ನಿರ್ಮಿಸಲಾಗಿದೆ. ನಾನು ಅಲ್ಲಿ ಐದು ತಿಂಗಳು ನೆಲೆಸಿದ್ದೆ. ಇತ್ತೀಚಿನ ಶೆಡ್ಯೂಲ್ ನಲ್ಲಿ ನನಗೆ ಮನೆಯ ಭಾವನೆ ಬರಲು ಆರಂಭವಾಯಿತು” ಎಂದಿದ್ದಾರೆ.


ಕಾಂತಾರ ಎಂದರೆ ನಿಗೂಢ ಅರಣ್ಯ ಎಂಬ ಅರ್ಥ ನೀಡುತ್ತದೆ. ಸಪ್ತಮಿ ಈ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಪಾತ್ರವನ್ನು ನಿರ್ವಹಿಸಿದ್ದಾರೆ. “ನಾನು ಮಾಡುತ್ತಿರುವ ಪಾತ್ರ ಅದಾಗಲೇ ತರಬೇತಿ ಮುಗಿಸಿ ಅರಣ್ಯ ಇಲಾಖೆಯಲ್ಲಿ ಸೇರಿರುತ್ತಾಳೆ. ಅವಳ ಮೊದಲ ಪೋಸ್ಟಿಂಗ್ ಆ ಗ್ರಾಮಕ್ಕೆ ಆಗಿರುತ್ತದೆ. ಲೀಲಾ ಮೌನವಾಗಿರುವ ಹುಡುಗಿ ಆಗಿರುತ್ತಾಳೆ. ರಿಷಬ್ ಸರ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದೇನೆ. ಸಾವಿರ ಪದಗಳನ್ನು ಮೌನದಲ್ಲಿ ತಿಳಿಸಬಹುದು ಎಂಬುದನ್ನು ನನ್ನ ಪಾತ್ರ ನನಗೆ ಕಲಿಸಿದೆ. ಒಂದು ಮಾತನ್ನೂ ಹೇಳದೇ ಅವಳು ಮಾತನಾಡಬಲ್ಲಳು ಮತ್ತು ಇದು ನನಗೆ ನಟಿಯಾಗಿ ಆಕರ್ಷಿತಳಾಗುವಂತೆ ಮಾಡಿತು” ಎಂದಿದ್ದಾರೆ.


ಕಾಂತಾರ ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು ಹೆಚ್ಚಿನ ದೃಶ್ಯಗಳು ರಾತ್ರಿಯಲ್ಲಿ ಶೂಟಿಂಗ್ ಮಾಡಲಾಗಿದೆ. ” ರಿಷಬ್ ಸರ್ ಎಲ್ಲಾ ಸಮಯದಲ್ಲೂ ಲವಲವಿಕೆಯಿಂದ ಇರುತ್ತಾರೆ. ಇಂತಹ ಸಮಯದಲ್ಲಿ ನೀವು ವಾರಗಟ್ಟಲೆ ಶೂಟಿಂಗ್ ಮಾಡುತ್ತಿದ್ದೀರಿ. ನಿಮ್ಮನ್ನು ಪ್ರೇರೇಪಿಸುವ ಜನರು ನಿಮಗೆ ಬೇಕಾಗುತ್ತದೆ. ನಾವು ಸಾಮಾನ್ಯವಾಗಿ ಸೆಟ್ ಗೆ ಮೊದಲೇ ಬರುತ್ತೇವೆ ಹಾಗೂ ಈ ಸಮಯದಲ್ಲಿ ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ” ಎಂದಿದ್ದಾರೆ.


ಸಪ್ತಮಿ ಎಷ್ಟೇ ಚಿತ್ರಗಳಲ್ಲಿ ನಟಿಸಿದರೂ ಈ ಸಿನಿಮಾ ಮರೆಯಲಾರೆ ಎನ್ನುತ್ತಾರೆ. ಲೀಲಾ ಪಾತ್ರದ ಭಾವನಾತ್ಮಕತೆ ನನ್ನಲ್ಲಿ ಸದಾ ಉಳಿಯುತ್ತದೆ ಎನ್ನುತ್ತಾರೆ ಸಪ್ತಮಿ.




