- May 30, 2022
ಸೈನಿಕರ ಜೊತೆಗೆ ಕಾಲ ಕಳೆದ ಬಾಲಿವುಡ್ ನಟಿ


ನಟಿ ರಿಚಾ ಚಡ್ಡಾ ಇತ್ತೀಚೆಗೆ ಲಡಾಕ್ ಇಂಟರ್ ನ್ಯಾಷನಲ್ ಮ್ಯೂಸಿಕ್ ಫೆಸ್ಟಿವಲ್ ನಲ್ಲಿ ಪಾಲ್ಗೊಂಡಿದ್ದಾರೆ. ಸಮುದ್ರ ಮಟ್ಟದಿಂದ 12000 ಫೀಟ್ ಎತ್ತರದಲ್ಲಿ ಇರುವ ಲಡಾಕ್ ನಲ್ಲಿ ಸೈನಿಕರ ಜೊತೆ ಕಾಲ ಕಳೆಯುವ ಅವಕಾಶ ಅವರಿಗೆ ದೊರಕಿದೆ.




ರಿಚಾ ಸೈನಿಕರೊಂದಿಗೆ ಕೆಲವು ದಿನಗಳು ಕಳೆದಿದ್ದಾರೆ. ಈ ಅನುಭವವನ್ನು ಜೀವನದಲ್ಲಿ ಮರೆಯಲಾರೆ ಎಂದಿದ್ದಾರೆ.
“ಸಮುದ್ರ ಮಟ್ಟದಿಂದ 12000 ಫೀಟ್ ಎತ್ತರದಲ್ಲಿ ಇರುವ ಲಡಾಕ್ ನಲ್ಲಿ ಯುವ ಸೈನಿಕರೊಂದಿಗೆ ಮರೆಯಲಾರದ ದಿನಗಳನ್ನು ಕಳೆದಿದ್ದೇನೆ. ಇದೊಂದು ಜೀವನದಲ್ಲಿ ಮರೆಯಲಾಗದ ಅನುಭವ” ಎಂದಿದ್ದಾರೆ ರಿಚಾ.




“ಈ ಯುವ ಸೈನಿಕರು ಗಡಿಯಲ್ಲಿ ಪರಿಶ್ರಮದ ತರಬೇತಿ ಪಡೆಯುತ್ತಾರೆ. ನಗರಗಳಲ್ಲಿ ಕೆಲಸ ಮಾಡಿ ಐಷಾರಾಮಿ ಬದುಕನ್ನು ಎಂಜಾಯ್ ಮಾಡುವ ಬದಲು ದೇಶವನ್ನು ಕಾಯುತ್ತಾರೆ. ಇವರಿಗೆ ನನ್ನ ಗೌರವವಿದೆ. ಇಲ್ಲಿಗೆ ಬಂದಿರುವುದು ಉತ್ತಮ ಅನುಭವ. ನಮ್ಮ ದೇಶದ ನಿಜವಾದ ಹೀರೋಗಳನ್ನು ಭೇಟಿ ಮಾಡಿದೆ”ಎಂದಿದ್ದಾರೆ.




ಭೋಲಿ ಪಂಜಾಬಿನ್ ,ಹೀರಾ ಮಂಡಿ ಮುಂತಾದ ಸಿನಿಮಾಗಳಲ್ಲಿ ರಿಚಾ ನಟಿಸುತ್ತಿದ್ದಾರೆ.






