• December 22, 2021

ರೈಡರ್ ನಿಖಿಲ್ ಗೆ ಮನಸೋತ ಸ್ಯಾಂಡಲ್ ವುಡ್ ನ ಮೋಹಕತಾರೆ

ರೈಡರ್ ನಿಖಿಲ್ ಗೆ ಮನಸೋತ ಸ್ಯಾಂಡಲ್ ವುಡ್ ನ ಮೋಹಕತಾರೆ

ಸ್ಯಾಂಡಲ್ ವುಡ್ ನ ಯುವರಾಜ ನಟ ನಿಖಿಲ್ ಕುಮಾರಸ್ವಾಮಿ ಅಭಿನಯದ ಲೀಡರ್ ಸಿನಿಮಾ ಇದೇ ವಾರ ತೆರೆಗೆ ಬರಲು ಸಿದ್ಧವಾಗಿದೆ…ವಿಜಯ್ ಕೊಂಡ ಸಿನಿಮಾಗೆ ನಿರ್ದೇಶನ ಮಾಡಿದ್ದು ಕಾಶ್ಮೀರ ಪರದೇಶಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ
..ಚಿತ್ರದ ಹಾಡುಗಳು ಮತ್ತು ಟ್ರೇಲರ್ ಸಾಕಷ್ಟು ಸದ್ದು ಮಾಡಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚು ಮಾಡಿದೆ.. ವಿಶೇಷ ಅಂದರೆ ರೈಡರ್ ಸಿನೆಮಾ ಬಿಡುಗಡೆ ಗೆ ನಟಿ ರಮ್ಯಾ ಶುಭಕೋರಿದರು …

ಸಿನಿಮಾ ಹಾಗೂ ರಾಜಕೀಯದಿಂದ ದೂರ ಉಳಿದಿರುವ ನಟಿ ರಮ್ಯಾ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳಿಗೆ ಸಪೋರ್ಟ್ ಮಾಡುವ ಮೂಲಕ ಸಿನಿಮಾ ಬಗ್ಗೆ ಇನ್ನೂ ಕೂಡ ಆಸಕ್ತಿ ಇದೆ ಎನ್ನುವುದನ್ನು ತೋರ್ಪಡಿಸುತ್ತಿದ್ದಾರೆ.. ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಮೀಲಕ ರೈಡರ್ ಚಿತ್ರಕ್ಕೆ ರಮ್ಯಾ ಆಲ್ ದಿ ಬೆಸ್ಟ್ ಹೇಳಿದ್ದಾರೆ …

ರಮ್ಯಾ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡಿದ್ದರೂ ಕೂಡ ಯಾವುದೇ ಭೇದಭಾವವಿಲ್ಲದೆ ಸಿನಿಮಾ ಕಲಾವಿದರು ನಾವೆಲ್ಲರೂ ಒಂದೇ ಎನ್ನುವ ರೀತಿಯಲ್ಲಿ ನಿಖಿಲ್ ಸಿನಿಮಾಗೆ ಶುಭ ಕೋರಿದ್ದಾರೆ ಇದರಿಂದ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ …