• January 19, 2022

ವಿದ್ಯಾರ್ಥಿ ಭವನ್ ನಲ್ಲಿ ರಚ್ಚುಗೆ ಅಥಿತಿ ಸತ್ಕಾರ

ವಿದ್ಯಾರ್ಥಿ ಭವನ್ ನಲ್ಲಿ ರಚ್ಚುಗೆ ಅಥಿತಿ ಸತ್ಕಾರ

ಸದ್ಯ ಸ್ಯಾಂಡಲ್ ವುಡ್ ನಂಬರ್ ಒನ್ ನಟಿ ರಚಿತಾ ರಾಮ್.. ಡಿಂಪಲ್ ಕ್ವೀನ್ ನಂಬರ್ ಒನ್ ಸ್ಟಾರ್ ಆಗಿದ್ದರೂ ಕೂಡ ಸಿಂಪಲ್ಲಾಗಿ ಲೈಫ್ ಲೀಡ್ ಮಾಡಲು ಬಯಸುತ್ತಾರೆ…ಅದಷ್ಟೇ ಅಲ್ಲದೆ ಅಭಿಮಾನಿಗಳು ಹಾಗೂ ಸಾರ್ವಜನಿಕ ರಾಜ್ ಜೊತೆ ಆಗಾಗ ಕನೆಕ್ಟ್ ಇರಬೇಕು ಎಂದು ಆಸೆ ಪಡುತ್ತಾರೆ…

ಶೂಟಿಂಗ್ ನಿಂದ ಫ್ರೀಯಾಗಿದ್ದ ಕಾರಣ ನಟಿ ರಚಿತಾ ರಾಮ್ ಇತ್ತೀಚೆಗಷ್ಟೇ ಬೆಂಗಳೂರನ್ನು ಒಂದು ರೌಂಡ್ ಹಾಕಿದ್ದಾರೆ…ತಮ್ಮ ಸ್ನೇಹಿತ ಹಾಗೂ ನಿರ್ದೇಶಕ ಮಯೂರ್ ರಾಘವೇಂದ್ರ ಅವರ ಜತೆ ಬೆಂಗಳೂರು ರೌಂಡ್ಸ್ ಹಾಕಿರೋ ರಚಿತಾ ಮೊದಲಿಗೆ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ…

ಅನಂತರ ಬೆಳಗಿನ ಉಪಹಾರಕ್ಕಾಗಿ ಗಾಂಧೀಬಜಾರ್ ನಲ್ಲಿರುವ ವಿಧ್ಯಾರ್ಥಿ ಭವನ್ ಹೋಟೆಲ್ ಗೆ ಭೇಟಿ ಕೊಟ್ಟಿದ್ದಾರೆ …ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಫೇಮಸ್ ಆಗಿರೋ ಕಾರಣ ಹೋಟೆಲ್ ಗೆ ಭೇಟಿ ಕೊಟ್ಟು ದೋಸೆಯ ರುಚಿ ನೋಡಿದ್ದಾರೆ… ಅಪರೂಪಕ್ಕೆ ಬಂದ ಅತಿಥಿಯನ್ನು ಹೋಟೆಲ್ ನವರು ಅದ್ದೂರಿಯಾಗಿ ಸ್ವಾಗತ ಮಾಡಿ ಆತ್ಮೀಯವಾಗಿ ಸತ್ಕರಿಸಿದ್ದಾರೆ ..ರಚಿತ ದೋಸೆಯ ರುಚಿಯನ್ನು ನೋಡಿ ಪದಗಳ ಮೂಲಕ ದೋಸೆ ಬಗ್ಗೆ ಹಾಡಿ ಹೊಗಳಿದ್ದುಅದರ ಜತೆಗೆ ತಮ್ಮ ಆಟೋಗ್ರಾಫ್ ಹಾಕಿ ಹೋಟೆಲ್ ನವರಿಗೆ ನೀಡಿದ್ದಾರೆ…