• May 23, 2022

ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅಶ್ವಿನಿ ಹೇಳಿದ್ದೇನು ಗೊತ್ತಾ?

ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅಶ್ವಿನಿ ಹೇಳಿದ್ದೇನು ಗೊತ್ತಾ?

ಸದ್ಯ ಚಿತ್ರ ರಂಗದಲ್ಲಿ ನಡೆಯುತ್ತಿರುವ ಬಾಡಿ ಶೇಮಿಂಗ್ ಹಾಗೂ ಲಿಂಗ ತಾರತಮ್ಯದ ಬಗ್ಗೆ ನಟಿಯರು ಧ್ವನಿ ಎತ್ತಿದ್ದಾರೆ. ಈ ಬಗ್ಗೆ ನಟಿ ರಮ್ಯಾ ಕೂಡಾ ದನಿ ಎತ್ತಿದ್ದು ಇದಕ್ಕೆ ಹಲವು ನಟಿಮಣಿಯರು ಕೈ ಜೋಡಿಸಿದ್ದಾರೆ. ಇದೀಗ ಅಶ್ವಿನಿ ನಕ್ಷತ್ರ ಧಾರಾವಾಹಿಯ ಅಶ್ವಿನಿ ಪಾತ್ರಧಾರಿ ಮಯೂರಿ ಕೂಡ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ನಟಿ ಚೇತನಾ ರಾಜ್ ನಿಧನದ ನಂತರ ಸಮಾನತೆಯ ಕೂಗು ಜೋರಾಗಿದೆ.

“ಸಿನಿಮಾರಂಗದಲ್ಲಿ ಎಲ್ಲಾ ನಟಿಯರಿಗೂ ಈ ಸವಾಲು ಎದುರಾಗಿರುತ್ತದೆ. ನಮ್ಮನ್ನು ನಾವು ಪ್ರೀತಿಸಬೇಕು. ನಾವು ಹೇಗಿದ್ದೇವೆ ಎನ್ನುವುದನ್ನು ನಾವು ಒಪ್ಪಿಕೊಂಡರೆ ಸಾಕು” ಎನ್ನುವ ನಟಿ ಮಯೂರಿ “ನಟಿಯರು ಮಾತ್ರ ಅಲ್ಲ, ಎಲ್ಲರೂ ಬಾಹ್ಯ ಸೌಂದರ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ತೆಳ್ಳಗೆ ಇದ್ದರೆ ಮಾತ್ರ ಸೌಂದರ್ಯ ಎಂದು ಈಗಿನ ಪೀಳಿಗೆಯ ಮಕ್ಕಳಲ್ಲಿ ಇದೆ‌. ಈ ರೀತಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು” ಎಂದಿದ್ದಾರೆ ಮಯೂರಿ.

ಮಯೂರಿ ಚಿತ್ರ ರಂಗಕ್ಕೆ ಬಂದಾಗ ನಟಿ ಎಂದರೆ ಹೀಗಿರಬೇಕು ಎಂದು ಹಲವರು ಹೇಳಿದ್ದರಂತೆ. ಸದ್ಯ ಮಗುವಿನ ಪೋಷಣೆಯಲ್ಲಿ ತೊಡಗಿಸಿ ಕೊಂಡಿರುವ ಮಯೂರಿ ಫಿಟ್ ನೆಸ್ ಬಗ್ಗೆ ಗಮನ ನೀಡುತ್ತಿದ್ದಾರೆ.