• March 7, 2022

ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾದ ಕಾವ್ಯ ಶಾ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾದ ಕಾವ್ಯ ಶಾ

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮೂಕಜ್ಜಿಯ ಕನಸು, ತಮಿಳಿನ ತಾರೈ ತಪ್ಪಟ್ಟೈ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯ ಶಾ ಸಪ್ತಪದಿ ತುಳಿಯಲು ಸಿದ್ದರಾಗಿದ್ದಾರೆ..

ತಮ್ಮ ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿರುವಂತೆ ಕಾವ್ಯ ಶಾ ಈಗಾಗಲೇ ಮದುವೆಗೆ ಬೇಕಾದ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ… ಏಪ್ರಿಲ್ ಎರಡನೇ ವಾರದಲ್ಲಿ ಕಾವ್ಯ ಮದುವೆ ಜರುಗಲಿದ್ದು ಕಾವ್ಯ ಮದುವೆ ಆಗುತ್ತಿರುವ ಹುಡುಗನ ಹೆಸರು ವರುಣ್ .

ವರುಣ್ ಮಾಧ್ಯಮ ಲೋಕದಲ್ಲಿ ಗುರುತಿಸಿಕೊಂಡಿದ್ದು ಈಗಾಗಲೇ ಸಾಕಷ್ಟು ಎಂಟರ್ ಟೈನ್ಮೆಂಟ್ ಚಾನೆಲ್ ಗಳಲ್ಲಿ ರಿಯಾಲಿಟಿ ಷೋಗಳನ್ನು ಆಯೋಜನೆ ಮಾಡುವ ಮೂಲಕ ಸಿನಿಮಾ ಗಣ್ಯರಿಗೆ ಪರಿಚಿತರಾಗಿದ್ದಾರೆ ..ಹತ್ತು ವರ್ಷಗಳಿಂದ ಸ್ನೇಹಿತರಾಗಿದ್ದ ಇವರಿಬ್ಬರು ಈಗ ಮನೆಯವರ ಆಶೀರ್ವಾದ ಪಡೆದು ಮದುವೆ ಆಗಲು ಸಿದ್ಧತೆ ಮಾಡಿಕೊಂಡಿದ್ದಾರೆ… ಇನ್ನೂ ಕಾವ್ಯಾ ಶಾ ಸ್ಯಾಂಡಲ್ ವುಡ್ ಸೇರಿದಂತೆ ಟಾಲಿವುಡ್ ಹಾಗೂ ಬಾಲಿವುಡ್ ಅಂಗಳದ ಸಿನಿ ಗಣ್ಯರಿಗೆ ಚಿರಪರಿಚಿತರಾಗಿದ್ದರಿಂದ ಕಾವ್ಯ ಶಾ ಮದುವೆಗೆ ಸ್ಯಾಂಡಲ್ ವುಡ್ , ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್ ನ ಸ್ಟಾರ್ ಗಳು ಬರುವ ಸಾಧ್ಯತೆಯಿದೆ

ಕಾವ್ಯ ಶಾ ಫಿಟ್ ನೆಸ್ ಬಗ್ಗೆ ತಮ್ಮದೇ ಆದ ಸ್ಟುಡಿಯೋ ಹೊಂದಿದ್ದಾರೆ. ಈ ಮೂಲಕ ಫಿಟ್ನೆಸ್ ಮಂತ್ರವನ್ನೂ ಅವರು ಅಭಿಮಾನಿಗಳ ಜತೆ ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ.