• March 5, 2022

ವರ್ಕೌಟ್ ಚಿತ್ರಗಳನ್ನು ಹಂಚಿಕೊಂಡಿರುವ ಕಾಜಲ್

ವರ್ಕೌಟ್ ಚಿತ್ರಗಳನ್ನು ಹಂಚಿಕೊಂಡಿರುವ ಕಾಜಲ್

ನಟಿ ಕಾಜಲ್ ಅಗರವಾಲ್ ಸದ್ಯ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಫಿಟ್ ನೆಸ್ ಕುರಿತು ಆಸಕ್ತಿ ಹೊಂದಿರುವ ಕಾಜಲ್ ವರ್ಕೌಟ್ ಮಾತ್ರ ತಪ್ಪಿಸಿಕೊಳ್ಳುವುದಿಲ್ಲ. ಈಗ ಗರ್ಭಿಣಿಯರು ಮಾಡುವಂತಹ ವ್ಯಾಯಾಮ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಗ್ನೆನ್ಸಿ ವೇಳೆ ಪ್ರತಿದಿನ ಮಾಡುವ ವರ್ಕೌಟ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಲ್ಯಾವೆಂಡರ್ ಹ್ಯೂಡ್ ಸ್ಪೋರ್ಟ್ಸ್ ಬ್ರಾ ಧರಿಸಿ ಹಾಗೂ ಲೂಸ್ ಜಾಕೆಟ್ ಧರಿಸಿ ವಿವಿಧ ರೀತಿಯಲ್ಲಿ ವ್ಯಾಯಾಮ ಮಾಡುವ ಕಾಜಲ್ ಗರ್ಭಿಣಿಯರಿಗೆ ಏರೋಬಿಕ್ಸ್ ಹಾಗೂ ವ್ಯಾಯಾಮ ಬಹಳ ಮುಖ್ಯ ಎಂದು ಬರೆದುಕೊಂಡಿದ್ದಾರೆ.

“ನಾನು ಯಾವಾಗಲೂ ಆಕ್ಟೀವ್ ಆಗಿರುತ್ತೇನೆ. ನನ್ನ ಇಡೀ ಜೀವನ ಕೆಲಸ ಮಾಡಿದ್ದೇನೆ. ಪ್ರೆಗ್ನೆನ್ಸಿಯಲ್ಲಿ ಯಾವುದೇ ತೊಂದರೆಗಳಿಲ್ಲದೇ ಇರಬೇಕೆಂದರೆ,ಆರೋಗ್ಯಕರವಾಗಿರಬೇಕೆಂದರೆ ಏರೋಬಿಕ್ಸ್ ಹಾಗೂ ಸ್ಟ್ರೆಂತ್ ಕಂಡಿಷನಿಂಗ್ ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸಬೇಕು. ಟ್ರೈನರ್ ನನ್ವ ಪ್ರೆಗ್ನೆನ್ಸಿ ವೇಳೆ ಫಿಟ್ ಆಗಿರಲು ಸಹಾಯ ಮಾಡುತ್ತಿದ್ದಾರೆ. ಈ ವ್ಯಾಯಾಮ ನನಗೆ ಸ್ಟ್ರಾಂಗ್, ಲಾಗ್ ಹಾಗೂ ತೆಳ್ಳಗಿರುವ ಫೀಲ್ ನೀಡುತ್ತದೆ. ಈ ಸಮಯದಲ್ಲಿ ಏರೋಬಿಕ್ಸ್ ನಮ್ಮ ದೇಹ ಫಿಟ್ ಆಗಿರಲು ಸಹಾಯ ಮಾಡುತ್ತದೆ”ಎಂದಿದ್ದಾರೆ.

ಹೊಸ ವರ್ಷದಂದು ಗೌತಮ್ ಕಿಚ್ಲು ಹಾಗೂ ಕಾಜಲ್ ಅಗರವಾಲ್ ತಾವು ತಂದೆ ತಾಯಿ ಆಗುತ್ತಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.