• February 9, 2022

ಪೋಲೀಸ್ ಅಧಿಕಾರಿಯಾಗಿ ಭಡ್ತಿ ಪಡೆದ ಚೈತ್ರಾ ಕೋಟೂರು..‌ ಅಸಲಿ ಸಂಗತಿ ಏನು ಗೊತ್ತಾ?

ಪೋಲೀಸ್ ಅಧಿಕಾರಿಯಾಗಿ ಭಡ್ತಿ ಪಡೆದ ಚೈತ್ರಾ ಕೋಟೂರು..‌ ಅಸಲಿ ಸಂಗತಿ ಏನು ಗೊತ್ತಾ?

ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಚೈತ್ರಾ ಕೋಟೂರು ಇದೀಗ ಪೋಲೀಸ್ ಅಧಿಕಾರಿಯಾಗಿ ನಿಮ್ಮ ಮುಂದೆ ಬರಲಿದ್ದಾರೆ.
ಗುರುರಾಜ್ ಕುಲಕರ್ಣಿ ನಿರ್ದೇಶನದ ಚಾರ್ಜ್ ಶೀಟ್ ಸಿನಿಮಾದಲ್ಲಿ ಪೋಲೀಸ್ ಅಧಿಕಾರಿಯಾಗಿ ನಟಿಸುವ ಮೂಲಕ ಮತ್ತೊಮ್ಮೆ ಹಿರಿತೆರೆಯಲ್ಲಿ ಖಡಕ್ ಅಧಿಕಾರಿಯಾಗಿ ಅಬ್ಬರಿಸಲಿದ್ದಾರೆ ಚೈತ್ರಾ ಕೋಟೂರು.

ಈ ಸಿನಿಮಾದ ಬಗ್ಗೆ ಹೇಳಿಕೊಳ್ಳುವ ಚೈತ್ರಾ “ತುಂಬಾ ಖುಷಿಯಾಗುತ್ತಿದೆ. ನಾನು ಇದೇ ಮೊದಲ ಬಾರಿ ನಾನು ಪೋಲೀಸ್ ಇನ್ಸ್ ಪೆಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ಇನ್ನು ಚಾರ್ಜ್ ಶೀಟ್ ಸಿನಿಮಾದಲ್ಲಿ ತನಿಖಾ ವರದಿಯನ್ನು ಯಾವ ರೀತಿಯಲ್ಲಿ ತಯಾರಿಸುತ್ತಾರೆ ಎಂಬುದನ್ನು ನಿಮ್ಮ ಮುಂದೆ ತೆರೆದಿಡಲಿದ್ದೇವೆ” ಎನ್ನುತ್ತಾರೆ.

ಸಸ್ಪೆನ್ಸ್ , ಕ್ರೈಮ್ ಥ್ರಿಲ್ಲರ್ ಕಥಾಹಂದರವುಳ್ಳ ಈ ಸಿನಿಮಾದಲ್ಲಿ ಬಾಲಾಜಿ ಶರ್ಮಾ ಹಾಗೂ ಸಾಗರ್ ಅವರು ನಟಿಸಲಿದ್ದಾರೆ. ಡಾ. ಸುನಿಲ್ ಕುಂಬಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುವುದು ಮಾತ್ರವಲ್ಲದೇ ಕಥೆಯನ್ನು ಕೂಡಾ ಬರೆದಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ ಸಣ್ಣ ಪಾತ್ರವೊಂದನ್ನು ನಿರ್ವಹಿಸಲಿರುವುದು ವಿಶೇಷ‌.

ಇನ್ನು ಚೈತ್ರಾ ಕೋಟೂರು ಅವರು ಕಿರುತೆರೆ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸಿದ್ದರು. ಬಿಗ್ ಬಾಸ್ ಮೂಲಕ ಸದ್ದು ಮಾಡಿದ ಈ ಚೆಲುವೆ ಇತ್ತೀಚೆಗೆ ಹುಡುಗ್ರು ತುಂಬಾ ಒಳ್ಳೇವ್ರು ಎಂಬ ಹಾಡನ್ನು ನಿರ್ಮಾಣ ಮಾಡಿದ್ದರು. ಚೈತ್ರಾ ಅವರೇ ಸಂಗೀತ ನೀಡಿ, ಸಾಹಿತ್ಯ ಬರೆದು ನಟಿಸಿದ ಈ ಹಾಡು ರ್ಯಾಪ್ ಶೈಲಿಯಲ್ಲಿದ್ದು ಅದು ಕೂಡಾ ಸಕತ್ ಹಿಟ್ ಆಗಿತ್ತು.