• April 13, 2022

ಬ್ಯಾಚುಲರ್ ಪಾರ್ಟಿಯಲ್ಲಿ ಬ್ಯುಸಿ ಮಮತಾ ರಾಹುತ್

ಬ್ಯಾಚುಲರ್ ಪಾರ್ಟಿಯಲ್ಲಿ ಬ್ಯುಸಿ ಮಮತಾ ರಾಹುತ್

ನಟಿ ಮಮತಾ ರಾಹುತ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಾ. ಸುರೇಶ್ ಜೊತೆ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಮಮತಾ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಖಾಸಗಿ ರೆಸಾರ್ಟ್ ನಲ್ಲಿ ನಡೆದ ಈ ಪಾರ್ಟಿಯಲ್ಲಿ ಬಾಲ್ಯದ ಗೆಳತಿಯರು, ಸಿನಿಮಾ ರಂಗದ ಸ್ನೇಹಿತರು ಪಾಲ್ಗೊಂಡಿದ್ದರು.

ಮೊನ್ನೆಯಷ್ಟೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮೇ 10 ಹಾಗೂ 11ರಂದು ಇವರ ವಿವಾಹ ನಡೆಯಲಿದೆ. “ನಮ್ಮದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಎರಡು ಕುಟುಂಬದವರು ಸೇರಿ ನಮ್ಮ ಮದುವೆಯನ್ನು ನಿಶ್ಚಯ ಮಾಡಿದೆ. ಮನೆಯವರ ನಿರ್ಧಾರದಂತೆ ನಾವಿಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ” ಎಂದಿದ್ದಾರೆ ಮಮತಾ ರಾಹುತ್.

“ಸುರೇಶ್ ಅವರು ಒಳ್ಳೆಯ ಹುಡುಗ. ಅವರಿಗೆ ಸಮಾಜದ ಕುರಿತು ಅಪಾರ ಕಾಳಜಿ ಇದೆ. ಈ ಕಾರಣಕ್ಕಾಗಿ ಸುರೇಶ್ ನನಗೆ ಇಷ್ಟವಾದರು” ಎಂದು ಭಾವಿ ಪತಿಯ ಬಗ್ಗೆ ಹೇಳುತ್ತಾರೆ ಮಮತಾ.

ಡಾ. ಸುರೇಶ್ ಮಂಗಳೂರಿನವರಾಗಿದ್ದು ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ಮನಃಶಾಸ್ತ್ರಜ್ಞ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿಯ ವಿವಾಹ ಬೆಂಗಳೂರಿನಲ್ಲಿ ನಡೆಯಲಿದ್ದು, ಕುಟುಂಬಸ್ಥರ ಜೊತೆಗೆ ಸಿನಿಮಾ ರಂಗದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಸಹನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಮಮತಾ ಕಾಮಿಡಿ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿರುವ ಈಕೆ ಕನ್ನಡ ಜೊತೆಗೆ ತಮಿಳು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.