• January 24, 2022

ಮಾಡ್ರನ್ ಲುಕ್ ನಲ್ಲಿ ಪಡ್ಡೆಗಳ‌ ಮನಸ್ಸು ಕದ್ದ ಅಮೃತಾ

ಮಾಡ್ರನ್ ಲುಕ್ ನಲ್ಲಿ ಪಡ್ಡೆಗಳ‌ ಮನಸ್ಸು ಕದ್ದ ಅಮೃತಾ

ಉಡುಪಿಯ ಹೋಟೆಲೂ… ಮೂಲೆ ಟೇಬಲು.. ಎಂದು ಧನಂಜಯ್ ಕೈ ಹಿಡಿದು ಹಾಡಿ ನಲಿದ ನಟಿ ಅಮೃತಾ ಅಯ್ಯಂಗಾರ್… ಹೌದು ಇತ್ತೀಚೆಗಷ್ಟೇ ಬಡವ ರಾಸ್ಕಲ್ ಸಿನಿಮಾ ಮೂಲಕ ಮನೆಮಾತಾಗಿರುವ ಅಮೃತಾ ಅಯ್ಯಂಗಾರ್ ಅವ್ರನ್ನ ಇಷ್ಟು ದಿನ ಕಾಲ ಎಲ್ಲರೂ ಟ್ರೆಡಿಷನಲ್ ಹಾಗೂ ಸಿಂಪಲ್ ಹುಡುಗಿ ಪಾತ್ರದಲ್ಲಿ ನೋಡಿದ್ದರು…ಆದರೆ ಇತ್ತೀಚೆಗಷ್ಟೆ ಅಮೃತ ಅಯ್ಯಂಗಾರ್ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ ..

ಮಾಡರ್ನ್ ಹಾಗೂ ಟ್ರೆಡಿಷನಲ್ ಎರಡೂ ಲುಕ್ ಗೂ ಸೈ ಎನ್ನಿಸಿಕೊಳ್ಳುವ ಈ ನಟಿ ಒಂದ್ಕಡೆ ಸೀರೆ ಉಟ್ಟು ಮಲ್ಲಿಗೆ ಹೂ ಮುಡಿದು ಕ್ಯಾಮೆರಾಗೆ ಪೋಸ್ ಕೊಟ್ರೆ, ಇನ್ನೊಂದು ಕಡೆ ಶಾರ್ಟ್ ಗೌನ್ ಹಾಕಿ ಕ್ಯಾಮೆರಾ ಫೇಸ್ ಮಾಡಿದ್ದಾರೆ …

ಸೀರೆಯುಟ್ಟು ಪಕ್ಕಾ ದೇಸಿ ಲುಕ್ ನಲ್ಲಿ ಹಳ್ಳಿ ಹೈದರ ಮನಸ್ಸು ಗೆದ್ದರೆ..ಮತ್ತೊಂದು ಕಡೆ ಮಾಡ್ರನ್ ಲುಕ್ ನಲ್ಲಿ ಪ್ಯಾಟೆ ಹುಡುಗರ ಹೃದಯ ಕದ್ದಿದ್ದಾರೆ ಅಮೃತಾ ಅಯ್ಯಂಗಾರ್ ..ಇತ್ತೀಚೆಗಷ್ಟೇ ಬಡವ ರಾಸ್ಕಲ್ ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ಅಮೃತಾ ಅಭಿನಯದ ವಿಂಡೋ ಸೀಟ್, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬಾ ಸಿನಿಮಾಗಳು ತೆರೆಗೆ ಬರಬೇಕಿದೆ …