- March 16, 2022
ತಾನು ಬಯಸಿದ್ದು ಸಿಕ್ಕಿರುವುದಕ್ಕೆ ಸಂತಸವಿದೆ ಎಂದ ಹ್ಯಾಂಡ್ ಸಮ್ ಹುಡುಗ


ಜೊತೆಜೊತೆಯಲಿ ಧಾರಾವಾಹಿಯ ಅಭಯ್ ಆಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಹ್ಯಾಂಡ್ ಸಮ್ ಹುಡುಗ ವಿರಾಟ್ ಕಿಸ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಸದ್ಯ ಅವರ ಎರಡನೇ ಸಿನಿಮಾ ಅದ್ದೂರಿ ಲವರ್ ಸಿನಿಮಾ ದ ಶೂಟಿಂಗ್ ನಡೆಯುತ್ತಿದೆ. ಇದೀಗ ಜಯಣ್ಣ ನಿರ್ಮಾಪಕರಾಗಿರುವ ದಿನಕರ್ ತೂಗುದೀಪ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲಿರುವ ವಿರಾಟ್ ತಾನು ಬಯಸಿದ್ದು ಪಡೆದಿರುವುದಕ್ಕೆ ಖುಷಿಯಾಗಿದ್ದಾರೆ.


“ಇದು ಆರು ವರ್ಷಗಳ ಕಾಯುವಿಕೆಯಾಗಿದೆ. ಈ ನಡುವೆ ನನಗೆ ಅನೇಕ ಸಿನಿಮಾಗಳ ಆಫರ್ ಬಂದಿದ್ದರೂ ಒಪ್ಪಿಕೊಳ್ಳಲಿಲ್ಲ.
ಬಂದಿರುವಂತಹ ಎಲ್ಲಾ ಪ್ರಾಜೆಕ್ಟ್ ಗಳನ್ನು ತಿರಸ್ಕರಿಸುವುದು ಸರಿಯಾದ ಕ್ರಮ ಅಥವಾ ಅಲ್ಲವೇ ಎಂದು ಆಶ್ಚರ್ಯ ಪಡುವ ಸಂದರ್ಭಗಳಿದ್ದವು. ಈಗ ಈ ಚಿತ್ರಕ್ಕೆ ಇಳಿದ ನಂತರ ನನ್ನ ತಾಳ್ಮೆ ಹಾಗೂ ನನ್ನ ನಂಬಿಕೆಗೆ ಪ್ರತಿಫಲ ಸಿಕ್ಕಿದೆ ಎಂದು ಭಾವಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.




ಸಿನಿಮಾ ಬಗ್ಗೆ ಮಾತನಾಡಿರುವ ವಿರಾಟ್ ” ಇದು ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ಆಗಿದ್ದು ಸದ್ಯ ಸ್ಕ್ರಿಪ್ಟ್ ಹಂತದಲ್ಲಿದೆ. ಈ ವರ್ಷವೇ ಶೂಟಿಂಗ್ ನಡೆಯಲಿದ್ದು ಈ ವರ್ಷಾಂತ್ಯಕ್ಕೆ ರಿಲೀಸ್ ಆಗುವ ನಂಬಿಕೆ ಇದೆ. ಅದ್ದೂರಿ ಲವರ್ ಶೂಟಿಂಗ್ ವೇಗವಾಗಿ ಸಾಗುತ್ತಿದೆ. ಎರಡು ಶೆಡ್ಯೂಲ್ ಪೂರ್ಣಗೊಂಡಿದೆ. ಈ ವರ್ಷ ನನ್ನ ಎರಡು ಸಿನಿಮಾಗಳು ಬಿಡುಗಡೆಯಾಗಲಿದ್ದು ನಾನು ಕಾತರನಾಗಿದ್ದೇನೆ” ಎಂದಿದ್ದಾರೆ.




ಸಿನಿಮಾಗಳ ಹೊರತಾಗಿ ವಿರಾಟ್ ಅವರ ಕೆರಿಯರ್ ನಲ್ಲಿ ಹಲವು ಬೆಳವಣಿಗೆಗಳನ್ನು ಹೊಂದಿದೆ. ಹಲವು ಎಂಡೋರ್ಸ್ ಮೆಂಟ್ ಡೀಲ್ ಗಳನ್ನು ಸದ್ಯದಲ್ಲಿಯೇ ಜನರಿಗೆ ಹೇಳಲಾಗುವುದು “ನನ್ನ ವೃತ್ತಿ ಜೀವನ ನಾನು ನಿರೀಕ್ಷಿಸಿದ ರೀತಿಯಲ್ಲಿ ರೂಪುಗೊಳ್ಳುತ್ತಿದೆ ಎಂದು ನಾನು ಕೃತಜ್ಞನಾಗಿದ್ದೇನೆ” ಎಂದಿದ್ದಾರೆ.






