- April 25, 2022
ನಿರ್ದೇಶನ ನಟನೆಯನ್ನೂ ಮೀರಿದ ಅನುಭವ – ವಿಕ್ಕಿ ವರುಣ್


ಕೆಂಡ ಸಂಪಿಗೆ , ಕಾಲೇಜು ಕುಮಾರ ಸಿನಿಮಾಗಳಲ್ಲಿ ನಟಿಸಿ ಪ್ರತಿಭಾವಂತ ನಟರ ಪಟ್ಟಿಗೆ ಸೇರಿರುವ ನಟ ವಿಕ್ಕಿ ವರುಣ್ ಈಗ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಕಾಲಾ ಪತ್ಥರ್ ಸಿನಿಮಾದ ನಿರ್ದೇಶಕರಾಗಿ ವಿಕ್ಕಿ ವರುಣ್ ಕಾಣಿಸಿಕೊಂಡಿದ್ದು ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.


ಕಾಲಾ ಪತ್ಥರ್ ಚಿತ್ರದ ಕಥೆಯನ್ನು ಸತ್ಯಪ್ರಕಾಶ್ ಬರೆದಿದ್ದು ಗಟ್ಟಿ ಕಥೆಯನ್ನು ಇಟ್ಟುಕೊಂಡು ಕಮರ್ಷಿಯಲ್ ಚಿತ್ರವನ್ನಾಗಿಸಲು ವಿಕ್ಕಿ ವರುಣ್ ಸಾರಥ್ಯ ವಹಿಸಿದ್ದಾರೆ. ದುನಿಯಾ ಸೂರಿ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವಿಕ್ಕಿ ಅವರಿಗೆ ಮೊದಲಿನಿಂದಲೂ ನಿರ್ದೇಶನದ ಒಲವಿತ್ತು.


“ತುಂಬಾ ದಿನಗಳಿಂದ ನಿರ್ದೇಶನ ಮಾಡುವ ಆಸೆಯಿತ್ತು. ಕಾಲಾ ಪತ್ಥರ್ ಕಥೆ ಕೇಳಿದ ನಂತರ ನಿರ್ದೇಶನ ಮಾಡಬೇಕೆನಿಸಿತು. ಈಗಾಗಲೇ ಟಾಕಿ ವಿಭಾಗದ ಶೂಟಿಂಗ್ ಮುಗಿಸಿದ್ದೇನೆ” ಎಂದಿದ್ದಾರೆ.


“ನಟನೆ ನಿರ್ದೇಶನ ಎರಡನ್ನೂ ನಿರ್ವಹಿಸಿರುವುದು ವಿಭಿನ್ನ ಅನುಭವ ನೀಡಿತು. ನಿರ್ದೇಶನ ನಟನೆಯನ್ನು ಮೀರಿದ ಅನುಭವ. ಇದೊಂದು ವಿಭಿನ್ನ ಕಂಟೆಂಟ್ ಹೊಂದಿದೆ. ಇದನ್ನು ಕಮರ್ಷಿಯಲ್ ಆಗಿ ಹೇಗೆ ಹೇಳಬಹುದು ಎಂಬುದನ್ನು ತೋರಿಸಿದ್ದೇವೆ. ಅನೂಪ್ ಸೀಳಿನ್ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ರೀತಿಯ ಸಂಗೀತ ನೀಡಿದ್ದಾರೆ ” ಎಂದಿದ್ದಾರೆ.




ಈ ಸಿನಿಮಾದಲ್ಲಿ ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದು ನಾಗಾಭರಣ , ರಾಜೇಶ್ ನಟರಂಗ ಮುಂತಾದ ಕಲಾವಿದರು ನಟಿಸಿದ್ದಾರೆ.






