- December 3, 2021
ಬ್ಯಾಡ್ ಮ್ಯಾನರ್ಸ್ ಅಡ್ಡದಲ್ಲಿ ಟಗರು ಶಿವ


ಸುಕ್ಕ ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ… ಈಗಾಗಲೇ 2 ಶೆಡ್ಯೂಲ್ ಮುಗಿಸಿರೋ ಸಿನಿಮಾ ಟೀಮ್ ಸದ್ಯ ಬೆಂಗಳೂರಿನಲ್ಲಿ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಚಿತ್ರೀಕರಣ ಮಾಡುತ್ತಿದೆ ..


ಬೆಂಗಳೂರಿನ ಎಚ್ ಎಂಟಿ ಏರಿಯಾದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು, ಚಿತ್ರೀಕರಣದ ಸೆಟ್ ಗೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿದ್ದಾರೆ …ಬ್ಯಾಡ್ ಮ್ಯಾನರ್ಸ್ ನ ಸೆಟ್ ಗೆ ಭೇಟಿ ಕೊಟ್ಟಿರೋ ಶಿವರಾಜ್ ಕುಮಾರ್ ಕೆಲ ಗಂಟೆಗಳ ಕಾಲ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಜೊತೆ ಕಾಲ ಕಳೆದಿದ್ದಾರೆ ..


ಕೇವಲ ಶಿವರಾಜ್ ಕುಮಾರ್ ಮಾತ್ರವಲ್ಲದೆ ಬ್ಯಾಡ್ ಮ್ಯಾನರ್ಸ್ ಸಿನಿಮಾ ಸೆಟ್ ಗೆ ನಟ ಧನ್ವೀರ್ ಹಾಗೂ ಶಿವರಾಜ್ ಕೆ ಆರ್ ಪೇಟೆ ಕೂಡ ಭೇಟಿ ಕೊಟ್ಟಿದ್ದಾರೆ ..ಬ್ಯಾಡ್ ಮ್ಯಾನರ್ಸ್ ಸಿನಿಮಾವನ್ನ ಸೂರಿ ನಿರ್ದೇಶನ ಮಾಡುತ್ತಿದ್ದು ಸುದೀ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ… ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ರಚಿತಾರಾಮ್ ನಟಿಸಿದ್ದಾರೆ …ಚಿತ್ರದ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು, ಅಭಿಷೇಕ್ ಅಂಬರೀಷ್ ಹಾಗೂ ಸೂರಿ ಕಾಂಬಿನೇಷನ್ ನಲ್ಲಿ ಸಿನಿಮಾ ಹೇಗೆ ಮೂಡಿಬರಲಿದೆ ಅನ್ನೋ ಕುತೂಹಲ ಪ್ರೇಕ್ಷಕರಿಗಿದೆ..




