• July 1, 2022

ವೆಡ್ಡಿಂಗ್ ಗಿಫ್ಟ್ ಜೊತೆ ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ ನಿಶಾನ್ ನಾಣಯ್ಯ

ವೆಡ್ಡಿಂಗ್ ಗಿಫ್ಟ್ ಜೊತೆ ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ ನಿಶಾನ್ ನಾಣಯ್ಯ

ಜುಲೈ ಎಂಟರಂದು ತೆರೆ ಕಾಣಲಿರುವ ಕನ್ನಡದ ಹೊಸ ಸಿನಿಮಾ ‘ವೆಡ್ಡಿಂಗ್ ಗಿಫ್ಟ್’ ನಲ್ಲಿ ಬಹುಭಾಷಾ ನಟ ನಿಶಾನ್ ನಾಣಯ್ಯ ಅಭಿನಯಿಸಲಿದ್ದಾರೆ. ವಿಕ್ರಂ ಪ್ರಭು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಪ್ರೇಮ ಹಾಗು ಸೋನು ಗೌಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೂಲತಃ ಮಡಿಕೇರಿಯವರಾಗಿರುವ ನಿಶಾನ್ ಚಿತ್ರದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ‘ನನಗೆ ಮೊದಲನೆಯದಾಗಿ ಸ್ಕ್ರಿಪ್ಟ್ ತುಂಬಾ ಇಷ್ಟವಾಯಿತು. ವಿಕ್ರಂ ಪ್ರಭು ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುತ್ತಿದ್ದಾರೆ. ಅವರಿಗೆ ಚಿತ್ರರಂಗದ ಬಗ್ಗೆ ಇರುವ ಒಲವು ಮತ್ತು ವಿವರಣೆಯ ಸಾಮರ್ಥ್ಯ ನನಗೆ ತುಂಬಾ ಹಿಡಿಸಿತು. ವೆಡ್ಡಿಂಗ್ ಗಿಫ್ಟ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುತ್ತಿರುವುದು ತುಂಬಾ ಖುಷಿ ನೀಡಿದೆ’ ಎಂದರು.

ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ ‘ಬಿಲಾಸ್ ರಾವ್ ಎನ್ನುವ ಸೆಲ್ಫ್ ಮೇಡ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಔಷಧೀಯ ವ್ಯವಹಾರ ಮಾಡುವ ಈತನಿಗೆ ಪ್ರೇಮವಾಗುತ್ತದೆ. ಆದರೆ ನಂತರ ಪ್ರೀತಿಯು ವಿಚಿತ್ರವಾದ ತಿರುವನ್ನು ಪಡೆದುಕೊಳ್ಳಲಿದ್ದು ಬಂಧನ ಮತ್ತು ನಾಟಕೀಯ ಸನ್ನಿವೇಶಗಳೊಂದಿಗೆ ಸಿನಿಮಾ ಮುಂದುವರಿಯಲಿದೆ’ ಎಂದರು.

ಸ್ಯಾಂಡಲ್ ವುಡ್ ನಲ್ಲಿ ಕೆಲಸ ಮಾಡಿದ ಬಗ್ಗೆ ತಮ್ಮ ಅನುಭವವನ್ನು ಹೇಳಿದ ನಿಶಾಂತ್ ’45 ದಿನಗಳ ಚಿತ್ರೀಕರಣ ಮರೆಯಲಾಗದಂತದ್ದು. ಚಿತ್ರೀಕರಣದ ಭಾವನೆ ಯಾವತ್ತೂ ಬಂದಿಲ್ಲ. ಅಚ್ಯುತ್ ಕುಮಾರ್, ಪ್ರೇಮ, ಸೋನು ಗೌಡ ಅವರೊಂದಿಗೆ ಅಭಿನಯಿಸುವಾಗ ಕುಟುಂಬದ ಭಾವ ದೊರೆತಿದೆ. ಇನ್ನೂ ಈ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದರು.