• April 18, 2022

ಮಗನ ಸಾಧನೆಯನ್ನು ಕೊಂಡಾಡಿದ ಮಾಧವನ್

ಮಗನ ಸಾಧನೆಯನ್ನು ಕೊಂಡಾಡಿದ ಮಾಧವನ್

ನಟ ಮಾಧವನ್ ಅವರ ಪುತ್ರ ವೇದಾಂತ್ ಸಾಧನೆಯ ಹಾದಿಯಲ್ಲಿದ್ದಾರೆ. ಹದಿನಾರನೇ ವಯಸ್ಸಿನ ವೇದಾಂತ್ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದರು. ಈಗ ಮತ್ತೊಮ್ಮೆ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದು ಕೀರ್ತಿ ಪತಾಕೆ ಹಾರಿಸಿದ್ದಾರೆ. 1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗಳಿಸಿದ್ದಾರೆ.

ಡೆನ್ಮಾರ್ಕ್ ನ ಕೋಪನ್ ಹೇಗನ್ ನಲ್ಲಿ ನಡೆಯುತ್ತಿರುವ ಡ್ಯಾನಿಶ್ ಓಪನ್ ಈಜುಕೂಟದಲ್ಲಿ ಮಾಧವನ್ ಭಾಗವಹಿಸಿದ್ದಾರೆ. 15 ನಿಮಿಷ 57.86 ಸೆಕೆಂಡ್ ನಲ್ಲಿ ಗುರಿ ತಲುಪಿದ್ದಾರೆ. ಇದಲ್ಲದೇ 800 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಕಳೆದ ವರ್ಷ ಮಾರ್ಚ್ ನಲ್ಲಿ ನಡೆದ ಲಾತ್ವಿಯಾ ಓಪನ್ ನಲ್ಲಿ ಕಂಚು ಗೆದ್ದಿದ್ದರು. ಬಸವನಗುಡಿಯಲ್ಲಿ ನಡೆದಿದ್ದ ರಾಷ್ಟ್ರೀಯ ಜ್ಯೂನಿಯರ್ ಈಜು ಚಾಂಪಿಯನ್ ಶಿಪ್ ನಲ್ಲಿ ಏಳು ಪದಕಗಳನ್ನು ಪಡೆದಿದ್ದರು.

ಮಗನ ಸಾಧನೆ ನೋಡಿ ಹೆಮ್ಮೆ ಪಡುವ ಮಾಧವನ್ ಮಗನಿಗೆ ಸದಾ ಬೆಂಬಲ ನೀಡುತ್ತಾರೆ. ಮಗನ ಸಾಧನೆಯನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಸದ್ಯ ಮಗ ವೇದಾಂತ್ ಬೆಳ್ಳಿ ಹಾಗೂ ಚಿನ್ನದ ಪದಕ ಗೆದ್ದ ಕ್ಷಣವನ್ನು ಹಂಚಿಕೊಂಡಿರುವ ಮಾಧವನ್ ಅವರಿಗೆ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ.