• March 16, 2022

ಈ ಸಿನಿಮಾ ನನ್ನ ಕೆರಿಯರ್ ನ ಮುಖ್ಯವಾದ ಸಿನಿಮಾ – ಲಿಖಿತ್ ಶೆಟ್ಟಿ

ಇತ್ತೀಚೆಗೆ ಓಟಿಟಿಯಲ್ಲಿ ರಿಲೀಸ್ ಆಗಿರುವ ಫ್ಯಾಮಿಲಿ ಪ್ಯಾಕ್ ಚಿತ್ರ ವೀಕ್ಷಕರ ಮನ ಗೆದ್ದಿದೆ. ಚಿತ್ರದ ನಾಯಕ ಲಿಖಿತ್ ಶೆಟ್ಟಿ ಈ ಸಿನಿಮಾ ಅವರ ಕೆರಿಯರ್ ನಲ್ಲಿ ಮೈಲಿಗಲ್ಲು ಆಗಿದೆ ಎಂದಿದ್ದಾರೆ. ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಈ ಸಿನಿಮಾ ಮುಖ್ಯ ಎಂದಿದ್ದಾರೆ.

“ವೈಯಕ್ತಿಕವಾಗಿ ಈ ಸಿನಿಮಾ ನನ್ನ ಕೆರಿಯರ್ ನಲ್ಲಿ ಮುಖ್ಯವಾದ ಸಿನಿಮಾ. ಇದಕ್ಕೆ ಕಾರಣ ಪಿಆರ್ ಕೆ ಪ್ರೊಡಕ್ಷನ್ ನೊಂದಿಗೆ ಸೇರಿ ಈ ಸಿನಿಮಾ ಮಾಡಿದ್ದೇನೆ. ನನಗೂ ಸೇರಿದಂತೆ ಹಲವರಿಗೆ ಈ ಸಿನಿಮಾ ವಿಶೇಷವಾಗಿದೆ. ಇದರೊಂದಿಗೆ ಅರ್ಜುನ್ ಕುಮಾರ್ ಜೊತೆ ಎರಡನೇ ಸಲ ಕೆಲಸ ಮಾಡಿದ್ದೇನೆ” ಎ‌ನ್ನುತ್ತಾರೆ ನಾಯಕ ಲಿಖಿತ್ ಶೆಟ್ಟಿ.

ಇದರ ಜೊತೆಗೆ “ಪುನೀತ್ ರಾಜಕುಮಾರ್ ಅವರ ದೃಷ್ಟಿಕೋನದ ಭಾಗವಾಗಲು ಅವಕಾಶ ಪಡೆದಿದ್ದಕ್ಕೆ ಸಂತೋಷವಾಗಿದೆ. ಪ್ರತಿಭಾವಂತ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ನಾವು ಪ್ರತಿಯೊಬ್ಬರೂ ಕನ್ನಡ ಸಿನಿಮಾವನ್ನು ತಮ್ಮ ಪ್ರಭಾವಶಾಲಿ ನಿರೂಪಣೆಗಳೊಂದಿಗೆ ಬಿಟ್ಟುಹೋದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಮುನ್ನುಡಿಯನ್ನು ಹುಡುಕುತ್ತೇವೆ” ಎಂದಿದ್ದಾರೆ.

ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಫ್ಯಾಮಿಲಿ ಪ್ಯಾಕ್ ಕೂಡಾ ಒಂದು. ಅರ್ಜುನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್, ರಂಗಾಯಣ ರಘು ಮುಂತಾದ ಕಲಾವಿದರು ನಟಿಸಿದ್ದಾರೆ.