• April 26, 2022

ಸೆಲೆಬ್ರೇಶನ್ ಮೂಡ್ ನಲ್ಲಿದ್ದಾರೆ ಕಿರಣ್ ರಾಜ್.. ಕಾರಣ ಏನು ಗೊತ್ತಾ?

ಸೆಲೆಬ್ರೇಶನ್ ಮೂಡ್ ನಲ್ಲಿದ್ದಾರೆ ಕಿರಣ್ ರಾಜ್.. ಕಾರಣ ಏನು ಗೊತ್ತಾ?

ಕಿರುತೆರೆ ನಟ ಕಿರಣ್ ರಾಜ್ ಈಗ ಸೆಲೆಬ್ರೇಶನ್ ಮೂಡಿನಲ್ಲಿ ದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಖುಷಿಯಲ್ಲಿದ್ದಾರೆ ಕನ್ನಡತಿಯ ಪ್ರೀತಿಯ ಹರ್ಷ. ಫ್ಯಾನ್ಸ್ ತೋರುತ್ತಿರುವ ಪ್ರೀತಿಗೆ ಖುಷಿಯಾಗಿರುವ ಕಿರಣ್ ರಾಜ್ ಇನ್ಸ್ಟಾಗ್ರಾಮ್ ನಲ್ಲಿ ವಿಶೇಷ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಒಂದು ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಕಿರಣ್ ರಾಜ್ ತಮಗೆ ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದ ಹೇಳಿದ್ದಾರೆ. ತಮ್ಮ ಫೋಟೋ ಹಂಚಿಕೊಂಡಿರುವ ಕಿರಣ್ ರಾಜ್ ಕಪ್ಪು ವರ್ಣದ ಟುಕ್ಸೆಡೊ ನಲ್ಲಿ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ.

ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಿರಣ್ ಅವರಿಗೆ ಶುಭಾಶಯಗಳ ಮಹಾಪೂರವೇ ಬಂದಿವೆ. ಸಹನಟರು , ಸ್ನೇಹಿತರು, ಅಭಿಮಾನಿಗಳು ಎಲ್ಲರೂ ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ.

ಸದ್ಯ ಕನ್ನಡತಿ ಧಾರಾವಾಹಿಯಲ್ಲಿ ಹರ್ಷನ ಪಾತ್ರದಲ್ಲಿ ವೀಕ್ಷಕರ ಮನಗೆದ್ದಿರುವ ಕಿರಣ್ ಧಾರಾವಾಹಿ ಅಲ್ಲದೇ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ ಕಿರಣ್ ರಾಜ್‌.