• May 15, 2022

ಮನಬಿಚ್ಚಿ ಮಾತನಾಡಿದ ಕಾರ್ತಿಕ್ ಆರ್ಯನ್

ಮನಬಿಚ್ಚಿ ಮಾತನಾಡಿದ ಕಾರ್ತಿಕ್ ಆರ್ಯನ್

ಸದ್ಯ ಭೂಲ್ ಭುಲಯ್ಯ 2 ಚಿತ್ರದ ಪ್ರಚಾರದಲ್ಲಿ ತೊಡಗಿರುವ ನಟ ಕಾರ್ತಿಕ್ ಆರ್ಯನ್ ಅವರಿಗೆ ನೀವು ಇಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಉದ್ಯಮದ ಹೊರಗಿನಂತೇ ಭಾವಿಸುತ್ತೀರಾ ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಕಾರ್ತಿಕ್ ಯಾವ ಪ್ರೊಡಕ್ಷನ್ ಹೌಸ್ ನಿಂದಲೂ ಅವರಿಗೆ ಹಾಗೆ ಅನಿಸಿಲ್ಲವಂತೆ. ಅವರು ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಖುಷಿಯಾಗಿದ್ದಾರಂತೆ.

“ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಮಿಸ್ ಕಮ್ಯುನಿಕೇಶನ್ ಗಳು ನಡೆಯುತ್ತವೆ. ಇದು ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ನಡೆಯುತ್ತವೆ. ಕೆಲವೊಮ್ಮೆ ಇದು ಒಳ್ಳೆಯದು ಹಾಗೂ ಕೆಲವೊಮ್ಮೆ ಇದರಿಂದಾಗಿ ನೀವು ಕೆಲಸ ಕಳೆದುಕೊಳ್ಳುತ್ತೀರಿ” ಎಂದಿದ್ದಾರೆ.

ಇಂಡಸ್ಟ್ರಿ ಬದಲಾಗುತ್ತಿದೆ. ಉತ್ತಮ ಹಂತಕ್ಕೆ ಹೋಗುತ್ತಿದೆ. ಒಟಿಟಿಯ ಉದಯ ಈ ಉತ್ತಮ ಹಂತಕ್ಕೆ ಕಾರಣವಾಗಿದೆ. ಸಿನಿ ರಂಗದ ಬೆಳವಣಿಗೆಯ ಕುರಿತು ಮಾತ್ರ ಕಾರ್ತಿಕ್ ಯೋಚಿಸುತ್ತಾರೆ.

ಭೂಲ್ ಭುಲಯ್ಯ 2 ಚಿತ್ರ ಮೇ 20ಕ್ಕೆ ತೆರೆಗೆ ಬರಲಿದ್ದು ಅನೀಸ್ ಬಝ್ಮೀ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕಿಯಾರಾ ಅದ್ವಾನಿ , ಟಬು ಮುಂತಾದ ಕಲಾವಿದರು ನಟಿಸಿದ್ದಾರೆ.