• May 12, 2022

ಮಮ್ಮುಟ್ಟಿ ಜೊತೆ ಹರೀಶ್ ರಾಜ್

ಮಮ್ಮುಟ್ಟಿ ಜೊತೆ ಹರೀಶ್ ರಾಜ್

ಕನ್ನಡ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಹರೀಶ್ ರಾಜ್ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಜೊತೆ ನಟಿಸುವ ಅವಕಾಶ ಗಳಿಸಿದ್ದಾರೆ. ಹೀಗಾಗಿ ಖುಷಿಯಾಗಿದ್ದಾರೆ ನಟ ಹರೀಶ್ ರಾಜ್.

ಶೂಟಿಂಗ್ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಮಲೆಯಾಳಂ ಸಿನಿಮಾ ಸಿಬಿಐ 5 ಇದರಲ್ಲಿ ಮನಾಲ್ ಸಾಮ್ ಪಾತ್ರದಲ್ಲಿ ನಟಿಸಿರುವುದು ಅದ್ಭುತ ಅನುಭವ. ಮಮ್ಮುಟ್ಟಿ ಸರ್ ಜೊತೆ ನಟಿಸಲು ಕಾತರನಾಗಿದ್ದೇನೆ”ಎಂದಿದ್ದಾರೆ.

ಶೂಟಿಂಗ್ ಸಮಯದಲ್ಲಿ ಬಹಳ ಎಂಜಾಯ್ ಮಾಡಿರುವಂತೆ ಕಾಣುವ ನಟ ಹರೀಶ್ ರಾಜ್ ಅವರು ಇನ್ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡಿರುವ ಫೋಟೋವೇ ಇದಕ್ಕೆ ಸಾಕ್ಷಿ.

ಸದ್ಯ ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಹರೀಶ್ ರಾಜ್ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.