• February 23, 2022

ನಟ ಚೇತನ್ ಗೆ ನ್ಯಾಯಾಂಗ ಬಂಧನ

ನಟ ಚೇತನ್ ಗೆ ನ್ಯಾಯಾಂಗ ಬಂಧನ

ಸಿನಿಮಾ ನಟ ಹಾಗೂ ಹೋರಾಟಗಾರ ನಟ ಆ ದಿನಗಳು ಚೇತನ್ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿ ಕೊಳ್ಳುತ್ತಿರುತ್ತಾರೆ… ಸಿನಿಮಾವನ್ನ ಪಾರ್ಟ್ ಟೈಂ ಮಾಡಿಕೊಂಡು . ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವುದನ್ನು ಫುಲ್ ಟೈಂ ಮಾಡಿಕೊಂಡಿರುವ ನಟ ಚೇತನ್ ರನ್ನು ಪೊಲೀಸರು ಬಂಧಿಸಿದ್ದಾರೆ ….

ನ್ಯಾಯಾಧೀಶರನ್ನು ನಿಂದಿಸಿ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ನಟ ಚೇತನ್ ರನ್ನ ಶೇಷಾದ್ರಿಪುರಂ ಪೊಲೀಸರು ನಿನ್ನೆ ಮಧ್ಯಾಹ್ನ ಬಂಧಿಸಿದ್ದಾರೆ… ಇದೀಗ ನಟ ಚೇತನ್ ಅವರಿಗೆ ಎಂಟನೇ ಎಸಿಎಂಎಂ ಕೋರ್ಟ್ 14ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಿ ಆದೇಶಿಸಿದೆ …

ಚೇತನ್ ಬಂಧನದ ನಂತರ ಫೇಸ್ ಬುಕ್ ಲೈವ್ ಬಂದ ಅವರ ಪತ್ನಿ ಮೇಘಾ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ…ನಟ ಚೇತನ್ ಅಹಿಂಸಾ ಸಾಮಾನ್ಯ ಜನರಲ್ಲಿ ಮತ್ತು ಒಂದು ಕೋಮಿನ ಜನಾಂಗ ದವರಿಗೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮಾನ್ಯ ನ್ಯಾಯಾಲಯ ಸರ್ಕಾರ ಮತ್ತು ದೇಶದ ಸಾಂವಿಧಾನಿಕ ವ್ಯವಸ್ಥೆ ಮೇಲೆ ಅಪನಂಬಿಕೆ ಹಾಗೂ ಆಕ್ರೋಶ ಬರುವ ಹಾಗೆ ಟ್ವೀಟ್ ಮಾಡಿದ್ದಾರೆ…

ಟ್ವೀಟ್ ಮೂಲಕ ಮುಸ್ಲಿಂ ಕೋಮಿನವರು ಮತ್ತು ಇತರ ಜನ ಪ್ರತಿಭಟನೆ ಗಲಭೆ ಮತ್ತು ಇತ್ಯಾದಿ ಮಾಡುವಂತೆ ಸೂಚಿಸಿದ್ದಾರೆ.. ಚೇತನ್ ಕುಮಾರ್ ಅಹಿಂಸಾ ಅವರ ಟ್ವೀಟ್ ನಿಂದಾಗಿ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಅವಮಾನ ಮಾಡುವ ಮತ್ತು ಸದರಿಯವರ ಮಾನ್ಯ ನ್ಯಾಯಾಲಯದ ಇತರ ಪ್ರಕರಣ ವಿಚಾರಣೆಯನ್ನು ಕೈಬಿಡುವಂತೆ ಅಥವಾ ಅವರುಗಳು ನಿಷ್ಪಕ್ಷಪಾತ ವಿಚಾರಣೆ ಮಾಡಬೇಕಾಗಿದೆ ಎಂದು ಇವರ ಉದ್ದೇಶವಾಗಿರುತ್ತದೆ ಎಂದು ಎಫ್ಐಆರ್‌‌ ನಲ್ಲಿ ಉಲ್ಲೇಖಿಸಲಾಗಿದೆ… ಸದ್ಯ ಚೇತನ್ ಅವರಿಗೆ ನ್ಯಾಯಾಂಗ ಬಂಧನವಾಗಿತ್ತು ಇದರ ವಿರುದ್ಧ ಹೋರಾಡಲು ನಾನು ಸಿದ್ಧನಿದ್ದೇನೆ ಎಂದು ಚೇತನ್ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ್ದಾರೆ ..