• January 5, 2022

ಸಂಕ್ರಾಂತಿ ಸಂಭ್ರಮಕ್ಕೆ ಆಕ್ಷನ್ ಪ್ರಿನ್ಸ್ ಹೊಸ ಸಿನಿಮಾ !

ಸಂಕ್ರಾಂತಿ ಸಂಭ್ರಮಕ್ಕೆ ಆಕ್ಷನ್ ಪ್ರಿನ್ಸ್ ಹೊಸ ಸಿನಿಮಾ !

ಸಂಕ್ರಾಂತಿ ಸಂಭ್ರಮಕ್ಕೆ ನಟ ಧ್ರುವ ಸರ್ಜಾ ಅಭಿನಯದ ಹೊಸ ಸಿನಿಮಾ ಸಂಕ್ರಾಂತಿ ಸಂಭ್ರಮಕ್ಕೆ ಸೆಟ್ಟೇರಲಿದೆ… ಸದ್ಯ ಮಾರ್ಟಿನ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಧ್ರುವ ಹೊಸ ವರ್ಷದಿಂದ ಹೊಸ ಸಿನಿಮಾದ ಆರಂಭ ಮಾಡಲಿದ್ದಾರೆ …

ಸ್ಯಾಂಡಲ್ ವುಡ್ ನ ಶೋ ಮ್ಯಾನ್ ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಧ್ರುವಾ ಅಭಿನಯ ಮಾಡೋದು ಪಕ್ಕಾ ಆಗಿದೆ…ಆ ಸಿನಿಮಾದ ಮುಹೂರ್ತ ಸಂಕ್ರಾಂತಿ ಹಬ್ಬದಂದು ನಡೆಯಲಿದೆ ಈಗಾಗಲೇ ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿರುವ ನಿರ್ದೇಶಕ ಪ್ರೇಮ್ ಸಂಕ್ರಾಂತಿ ಹಬ್ಬದಂದು ಮುಹೂರ್ತ ಮಾಡಿ ಸಿನ್ಹಾಗೆ ಅಧಿಕೃತ ಚಾಲನೆ ನೀಡಲಿದ್ದಾರೆ …

ಕೆವಿಎನ್ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣ ಆಗಲಿದ್ದು, ಮೊದಲ ಹಂತದ ಚಿತ್ರೀಕರಣ ಜನವರಿ ಹದಿನೈದರಿಂದ ಆರಂಭವಾಗಲಿದೆ… ಮೊದಲಿಗೆ ಬೆಂಗಳೂರಿನ ನಲ್ಲಿಯೇ ಚಿತ್ರೀಕರಣ ಮಾಡಲಿದ್ದು ಈಗಾಗಲೇ ಅದಕ್ಕಾಗಿ ಅದ್ದೂರಿ ಸೆಟ್ ಗಳನ್ನ ಹಾಕಲು ಚಿತ್ರತಂಡ ಸಜ್ಜಾಗಿದೆ…

ಚಿತ್ರವನ್ನ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದು, ಸದ್ಯ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ… ಹಾಗಾಗಿ ಏಕಲವ್ಯ ತೆರೆಗೆ ಬಂದ ನಂತ್ರ ಧ್ರುವ ಅಭಿನಯದ ಚಿತ್ರದ ಪ್ರಚಾರವನ್ನು ಆರಂಭ ಮಾಡಲಿದ್ದಾರೆ ನಿರ್ದೇಶಕ ಪ್ರೇಮ್….ಒಟ್ಟಾರೆ ಈ ಹಿಂದೆ ಹೇಳಿದಂತೆ ಧ್ರುವ ವರ್ಷಕ್ಕೆ 2ಸಿನಿಮಾವನ್ನು ಒಪ್ಪಿಕೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ …