- April 18, 2022
ಅಗ್ನಿಸಾಕ್ಷಿ ಧಾರಾವಾಹಿಯ ನಾಯಕ – ನಾಯಕಿ ಈಗೇನು ಮಾಡ್ತಿದ್ದಾರೆ ಗೊತ್ತಾ?


ಕನ್ನಡ ಕಿರುತೆರೆಯ ಇತಿಹಾಸದಲ್ಲಿ ದಾಖಲೆ ಬರೆದ ಧಾರಾವಾಹಿಗಳ ಪೈಕಿ ಅಗ್ನಿಸಾಕ್ಷಿ ಕೂಡಾ ಒಂದು. ಎಂಟು ವರ್ಷಗಳ ಕಾಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯು ವಿಭಿನ್ನ ಕಥೆಯ ಜೊತೆಗೆ ತಾರಾಗಣದ ಮೂಲಕ ವೀಕ್ಷಕರನ್ನು ಸೆಳೆದಿತ್ತು. ಇದೀಗ ಧಾರಾವಾಹಿ ಮುಗಿದು ವರ್ಷ ಎರಡು ಕಳೆಯುತ್ತಾ ಬಂತು. ಅಂದ ಹಾಗೇ ಅಗ್ನಿಸಾಕ್ಷಿ ಧಾರಾವಾಹಿಯ ನಾಯಕ – ನಾಯಕಿ ಈಗೇನು ಮಾಡುತ್ತಿದ್ದಾರೆ ಎಂದು ನಿಮಗೆ ತಿಳಿಯಬೇಕಾಗಿದೆಯೇ? ಹಾಗಿದ್ದರೆ ನೀವಿದನ್ನು ಓದಲೇ ಬೇಕು.


ವಿಜಯ್ ಸೂರ್ಯ
ನಾಯಕ ಸಿದ್ದಾರ್ಥ್ ಆಗಿ ಹೆಣ್ಮಕ್ಕಳ ಹೃದಯಕ್ಕೆ ಕನ್ನ ಹಾಕಿ, ಅಲ್ಲಿಯೇ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿರುವ ಗುಳಿ ಕೆನ್ನೆಯ ಹುಡುಗ ವಿಜಯ್ ಸೂರ್ಯ ಉತ್ತರಾಯಣ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಮುಂದೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಸಿದ್ದಾರ್ಥ್ ಆಗಿ ಅಭಿನಯಿಸಿದ್ದ ವಿಜಯ್ ಸೂರ್ಯ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿಯೂ ಅದೇ ಪಾತ್ರಕ್ಕೆ ಜೀವ ತುಂಬಿದ್ದರು.


ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕ ಸೂರ್ಯಕಾಂತ್ ಆಗಿ ನಟಿಸಿ ಸೈ ಎನಿಸಿಕೊಂಡರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಕಿರುತೆರೆ ಜೊತೆಗೆ ಹಿರಿತೆರೆಲ್ಲಿಯೂ ಮಿಂಚಿದ್ದಾರೆ.


ಕ್ರೇಜಿಲೋಕ ಸಿನಿಮಾದ ಮೂಲಕ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ವಿಜಯ್ ಸೂರ್ಯ ಮುಂದೆ ಇಷ್ಟಕಾಮ್ಯ, ಸ, ಕದ್ದು ಮುಚ್ಚಿ ಸಿನಿಮಾದ ಮೂಲಕ ಹಿರಿತೆರೆಯಲ್ಲಿಯೂ ಕಮಾಲ್ ಮಾಡಿದರು. ಇದೀಗ ವೀರ ಪುತ್ರ ಸಿನಿಮಾದಲ್ಲಿ ಇವರು ನಾಯಕರಾಗಿ ನಟಿಸಲಿದ್ದು ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಅಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.


ವೈಷ್ಣವಿ ಗೌಡ
ನಾಯಕಿ ಸನ್ನಿಧಿ ಆಗಿ ಅಭಿನಯಿಸಿ ಹೆಂಗಳೆಯರ ಮನ ಗೆದ್ದ ಚೆಲುವೆ ವೈಷ್ಣವಿ ಗೌಡ. ಇದ್ದರೆ ಇವಳಂಥ ಸೊಸೆ ಬೇಕು ಎಂದು ಆಸೆ ಪಟ್ಟ ನಾರಿಮಣಿಯರಿಗೇನೂ ಲೆಕ್ಕವಿಲ್ಲ. ಸನ್ನಿಧಿಯಾಗಿ ಕರುನಾಡಿನಾದ್ಯಂತ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಈಕೆ ಸೀರಿಯಲ್ ಪ್ರಿಯರ ಪಾಲಿನ ಮನೆಮಗಳು ಹೌದು ಅನ್ನಿ. ದೇವಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆಗೆ ಹೆಸರು ತಂದುಕೊಟ್ಟಿದ್ದು ಸನ್ನಿಧಿ ಪಾತ್ರ.


ಗಿರ್ ಗಿಟ್ಲೆ ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದ ಈಕೆ ಬಹುಕೃತ ವೇಷಂ ಸಿನಿಮಾದಲ್ಲಿ ನಕ್ಷತ್ರ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇದರ ಜೊತೆಗೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಈಕೆ ಮಾತು, ನುಡಿ, ನಡವಳಿಕೆ ಮೂಲಕ ದೊಡ್ಮನೆಯಲ್ಲಿಯೂ ಯಶಸ್ಸು ಸಾಧಿಸಿದರು. ಇದೀಗ ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ.






