• June 16, 2022

ಬೇರೆ ಚಿತ್ರರಂಗಗಳಲ್ಲೂ ಪ್ರಶಂಸೆ ಪಡೆಯುತ್ತಿದೆ ‘777 ಚಾರ್ಲಿ’

ಬೇರೆ ಚಿತ್ರರಂಗಗಳಲ್ಲೂ ಪ್ರಶಂಸೆ ಪಡೆಯುತ್ತಿದೆ ‘777 ಚಾರ್ಲಿ’

‘777 ಚಾರ್ಲಿ’ ಎಲ್ಲರ ಮನೆಮಾತಾಗಿದೆ. ಕಲಿಯುಗದ ಧರ್ಮರಾಜನ ಕಥೆ ಹೇಳೋ ಈ ಸಿನಿಮಾದಲ್ಲಿನ ಧರ್ಮ ಹಾಗು ಚಾರ್ಲಿಯ ಪಾತ್ರಕ್ಕೆ ಎಲ್ಲರು ಮನಸೋತಿದ್ದಾರೆ. ಪಂಚ ಭಾಷೆಗಳಲ್ಲಿ ಬಿಡುಗಡೆಯಗಿರುವ ಈ ಪಾನ್-ಇಂಡಿಯನ್ ಸಿನಿಮಾಗೆ ಎಲ್ಲ ಭಾಗದಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಕೇವಲ ಪ್ರೇಕ್ಷಕರಷ್ಟೇ ಅಲ್ಲದೇ ಈ ಸಾಲಿಗೆ ಸೆಲೆಬ್ರಿಟಿಗಳೂ ಕೂಡ ಈ ಸಾಲಿಗೆ ಸೇರಿಕೊಂಡಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಹಾಗು ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿಯವರಿಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಬಾಲಿವುಡ್ ನ ಸ್ಟಾರ್ ನಟ ಜಾನ್ ಅಬ್ರಾಹಂ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ‘777 ಚಾರ್ಲಿ’ ಸಿನಿಮಾದ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ. ಟ್ರೈಲರ್ ನೋಡಿ ಮೆಚ್ಚಿಕೊಂಡ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಟ್ರೈಲರ್ ಹಂಚಿಕೊಂಡು, “ದಯವಿಟ್ಟು ಈ ಸಿನಿಮಾ ನೋಡಿ. ಇದೊಂದು ಎಲ್ಲರು ನೋಡಲೇಬೇಕಾದ ಸಿನಿಮಾ. ಇಂತಹ ಒಂದು ಚಿತ್ರ ಮಾಡಿದ್ದಕ್ಕೆ ಕಿರಣ್ ರಾಜ್ ಹಾಗು ರಕ್ಷಿತ್ ಶೆಟ್ಟಿಯವರಿಗೆ ನಾನು ಧನ್ಯವಾದ ಹೇಳಲು ಇಚ್ಚಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಖುದ್ದಾಗಿ ತಾವೇ ಕಿರಣ್ ರಾಜ್ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.

ತೆಲುಗಿನ ಪ್ರಖ್ಯಾತ ನಟಿ, ಬಾಲಿವುಡ್ ನಲ್ಲೂ ಕೂಡ ಗುರುತಿಸಿಕೊಂಡಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಕೂಡ ‘777 ಚಾರ್ಲಿ’ ಸಿನಿಮಾದ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. “ಈ ಸಿನಿಮಾದ ಬಗ್ಗೆ ಎಷ್ಟು ಹೇಳಿದರು ಸಾಲದು. ಅದರಲ್ಲಿನ ಭಾವನೆಗಳೆಲ್ಲ ನೈಜವಾಗಿ ಮೂಡಿಬಂದಿದೆ. ಎಲ್ಲರ ಹೃದಯ ತಟ್ಟುವಂತ ಸಿನಿಮಾ” ಎಂದು ಬರೆದುಕೊಂಡಿದ್ದಾರೆ.