• June 22, 2023

49ಕ್ಕೆ‌ ಕಾಲಿಟ್ಟ ದಳಪತಿ ವಿಜಯ್ಹುಟ್ಟು ಹಬ್ಬದಂದೆ “ಲಿಯೋ” ಫಸ್ಟ್ ಲುಕ್ ರಿವೀಲ್..!

49ಕ್ಕೆ‌ ಕಾಲಿಟ್ಟ ದಳಪತಿ ವಿಜಯ್ಹುಟ್ಟು ಹಬ್ಬದಂದೆ “ಲಿಯೋ” ಫಸ್ಟ್ ಲುಕ್ ರಿವೀಲ್..!

ತಮಿಳು ನಟ ದಳಪತಿ ವಿಜಯ್ ಗೆ ಇಂದು 49ರ ಹುಟ್ಟು ಹಬ್ಬದ ಸಂಭ್ರಮ, ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟನಿಗೆ ಟಾಲಿವುಡ್ ಆಕ್ಟರ್ ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ‌.ಇದೆ ಸಂಭ್ರಮದಲ್ಲಿ ದಳಪತಿ ವಿಜಯ್ ಅಭಿನಯದ “ಲಿಯೋ”ಸಿನಿಮಾದ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ಫ್ಯಾನ್ಸ್ ಗೆ ಸಿಹಿ ಸುದ್ಧಿ ನೀಡಿದ್ದಾರೆ.

‘ಲಿಯೋ’ ಚಿತ್ರತಂಡ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದೆ. ವಿಜಯ್‌ ಕೈಯ್ಯಲ್ಲಿ ರಕ್ತಸಿಕ್ತವಾದ ಸುತ್ತಿಗೆಯೊಂದನ್ನು ಹಿಡಿದು ಕೋಪದಿಂದ ಅಬ್ಬರಿಸುತ್ತಿರುವ ದೃಶ್ಯವನ್ನು ನೋಡಬಹುದು. ಸದ್ಯಕ್ಕೆ ಈ ಪೋಸ್ಟರ್‌ ವೈರಲ್‌ ಆಗುತ್ತಿದೆ.

ನಿರ್ದೇಶಕ ಲೋಕೇಶ್ ಕನಗರಾಜನ್ ಸಿನಿಮಾಗಳೆ ಹಾಗೆ, ಲೋಕೇಶ್ ಸಿನಿಮಾ ಮಾಡುತ್ತಿದ್ದಾರೆ ಅಂದ್ರೆ ಅವರ ಸಿನಿಮಾಗಳಿಗಾಗಿ ಬಂಡವಾಳ‌ ಹೂಡಲು ನಾ ಮುಂದು ತಾ ಮುಂದು ಅಂತಾ ಸಾಕಷ್ಟು ನಿರ್ಮಾಪಕರು ಮುಂದೆ ಬರುತ್ತಾರೆ ಆ ಮಟ್ಟಕ್ಕೆ‌ ಇಂದು ಲೋಕೇಶ್ ಕನಗರಾಜನ್ ಬೆಳೆದು ನಿಂತಿದ್ದಾರೆ.

ಮಾಸ್ಟರ್‌ ಸಿನಿಮಾ ನಂತರ ನಟ ವಿಜಯ್‌ ಮತ್ತೆ ಲೋಕೇಶ್‌ ಕನಕರಾಜ್‌ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಅನೌನ್ಸ್‌ ಆದಾಗಿನಿಂದ ಇದುವರೆಗೂ ಸಾಕಷ್ಟು ಗಮನ ಸೆಳೆದಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಭಿಮಾನಿಗಳು ಪ್ರತಿದಿನ ಎದುರು ನೋಡುತ್ತಿದ್ದಾರೆ. ವಿಶೇಷ ಎಂದರೆ ಸಿನಿಮಾ ಚಿತ್ರೀಕರಣ ಮುಗಿಸುವ ಮುನ್ನವೇ ಚಿತ್ರಮಂದಿರ, ಓಟಿಟಿ, ಸ್ಯಾಟ್‌ಲೈಟ್‌ ಬ್ಯುಸ್ನೆಸ್‌ ಮಾಡಿ ಮುಗಿಸಿದೆ ಎಂಬ ಮಾಹಿತಿ ಬಂದಿದೆ.

ಅದೇ ರೀತಿ ಇಂದು ರಿವೀಲ್ ಆದ “ಲಿಯೋ” ಸಿನಿಮಾದ ಹಂಚಿಕೆದಾರಹಕ್ಕಿಗಾಗಿ ತಮಿಳು,ತೆಲುಗು,ಕನ್ನಡ,ಸೌತ್ ಇಂಡಸ್ಟ್ರಿಯಲ್ಲೆ‌ ಸಖತ್ ಪೈಪೋಟಿ ಜೋರಾಗಿದೆ. ಇದನ್ನೆ ದೃಷ್ಟಿಯಲ್ಲಿಟ್ಟುಕೊಂಡ ಚಿತ್ರತಂಡ‌
ಸುಮಾರು‌ 27 ಕೋಟಿಯವರೆಗೆ ತೆಲುಗು ಹಕ್ಕಿಗೆ ಡಿಮಾಂಡ್ ಮಾಡಿದ್ದಾರೆಂಬುದು ಮಾಹಿತಿ.
ಕಾಲಿವುಡ್‌ ಮಾತ್ರವಲ್ಲದೆ ಟಾಲಿವುಡ್‌ ಮಂದಿ ಕೂಡಾ ‘ಲಿಯೋ’ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಹಾಗೇ ನಿರ್ಮಾಪಕರು ಹೇಳಿದ ಹಣ ಕೊಟ್ಟು ಥಿಯೇಟ್ರಿಕಲ್‌ ರೈಟ್ಸ್‌ ಪಡೆಯಲು ತೆಲುಗು ಚಿತ್ರರಂಗದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಗಳು ಕಾಯುತ್ತಿವೆ. ಶೀಘ್ರದಲ್ಲೇ ತೆಲುಗು ರೈಟ್ಸ್‌ ಪಡೆದದ್ದು ಯಾರು ಎಂಬುದು ಬಹಿರಂಗಗೊಳ್ಳಲಿದೆ.

ಸೆವೆನ್‌ ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಲಿಯೋ ಸಿನಿಮಾ‌ ತಯಾರಾಗುತ್ತಿದ್ದು ಸಿನಿಮಾಗೆ ಲೋಕೇಶ್ ಕನಗರಾಜನ್ ಆಕ್ಷನ್ ಕಟ್ ಹೇಳಲಿದ್ದು ನಾಯಕಿಯಾಗಿ ತ್ರಿಶಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಅನಿರುದ್ಧ್ ರವಿಚಂದನ್ ಸಂಗೀತ ಇರಲಿದ್ದು ಬಾಲಿವುಡ್ ನಟ ಸಂಜಯ್ ದತ್ ಕೂಡ ವಿಜಯ್ ತಂದೆ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ‌. ಸಿನಿಮಾ ಈ‌ ವರ್ಷದ ಅಕ್ಟೋಬರ್ ನಲ್ಲಿ ತೆರೆ ಕಾಣಲಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್