- May 11, 2022
ಅಭಿಮಾನಿಗಳಿಗೆ ವಿಶೇಷ ವಿಷಯ ತಿಳಿಸಿದ ಅನನ್ಯಾ ಪಾಂಡೆ


ಬಾಲಿವುಡ್ ನಟಿ ಅನನ್ಯಾ ಪಾಂಡೆ 2019ರಲ್ಲಿ ಸಿನಿ ಕೆರಿಯರ್ ಆರಂಭಿಸಿದ್ದು ಬಾಲಿವುಡ್ ನಲ್ಲಿ ತನ್ನದೇ ಸ್ಥಾನ ಪಡೆದಿದ್ದಾರೆ. *ಸ್ಟುಡೆಂಟ್ ಆಫ್ ದಿ ಇಯರ್ 2″ ಚಿತ್ರದ ಮೂಲಕ ಕೆರಿಯರ್ ಆರಂಭಿಸಿದ ಅನನ್ಯಾ ಅವರು ಬಾಲಿವುಡ್ ಪ್ರವೇಶಿಸಿ ಮೂರು ವರ್ಷಗಳಾಗಿವೆ. ಈ ಸಂಭ್ರಮದಲ್ಲಿ ಅನನ್ಯ ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.


ತನ್ನ ಇನ್ಸ್ಟಾ ಗ್ರಾಂ ಸ್ಟೋರಿಯಲ್ಲಿ ಬರೆದಿರುವ ಅನನ್ಯ “ಮೂರು ವರ್ಷಗಳ ಹಿಂದೆ ಸ್ಟುಡೆಂಟ್ ಆಫ್ ದಿ ಇಯರ್ 2 ರಿಲೀಸ್ ಆಗಿದೆ. ನನ್ನ ಮೂರು ವರ್ಷಗಳು ಪ್ರತಿದಿನ ಕನಸುಗಳಲ್ಲಿ ಬದುಕುತ್ತಿದ್ದೇನೆ. ಕೃತಜ್ಞತೆಯಲ್ಲದೇ ಬೇರೇನೂ ಅಲ್ಲ” ಎಂದಿದ್ದಾರೆ.




“ಸುಮಾರು ದೂರ ಸಾಗಬೇಕಿದೆ. ನೀವು ನೀಡಿರುವ ಪ್ರೀತಿಗೆ ನಾನು ಧನ್ಯವಾದ ಹೇಳುತ್ತೇನೆ. ಪರಿಶ್ರಮದಿಂದ ಇನ್ನೂ ಕೆಲಸ ಮಾಡುತ್ತೇನೆ ಹಾಗೂ ನಿಮಗೆ ಹೆಮ್ಮೆ ತರುತ್ತೇನೆ ಎಂದು ಭರವಸೆ ನೀಡುತ್ತೇನೆ. ಈ ಪಯಣದಲ್ಲಿ ನನ್ನ ಜೊತೆಗೆ ಇದ್ದ ಪ್ರತಿಯೊಬ್ಬರಿಗೂ – ಐ ಲವ್ ಯು “ಎಂದಿದ್ದಾರೆ.




ವಿಜಯ ದೇವರಕೊಂಡ ನಟನೆಯ ಲೈಗರ್ ಚಿತ್ರದಲ್ಲಿ ನಟಿಸಿರುವ ಅನನ್ಯ ಜೋಯಾ ಅಕ್ತರ್ ನಿರ್ದೇಶನದ ಕೋ ಗಯೇ ಹಮ್ ಕಹಾ ಚಿತ್ರದಲ್ಲಿ ಸಿದ್ದಾಂತ್ ಚತುರ್ವೇದಿ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.




