• June 26, 2023

1000 ಕೋಟಿ ಬಜೆಟ್​ನಲ್ಲಿ ‘ಆದಿಪುರುಷ್​ 2’​ಓಂ‌ ರಾವತ್ ಐಡಿಯಾಗೆ ಪ್ರಭಾಸ್​ ಗ್ರೀನ್ ಸಿಗ್ನಲ್ ಕೊಟ್ರಾ…?

1000 ಕೋಟಿ ಬಜೆಟ್​ನಲ್ಲಿ ‘ಆದಿಪುರುಷ್​ 2’​ಓಂ‌ ರಾವತ್ ಐಡಿಯಾಗೆ ಪ್ರಭಾಸ್​ ಗ್ರೀನ್ ಸಿಗ್ನಲ್ ಕೊಟ್ರಾ…?

ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಚಿತ್ರ‘ಆದಿಪುರುಷ್’ ಬಿಡುಗಡೆಯಾಗಿ ಒಳ್ಳಡಯ ರೆಸ್ಪಾನ್ಸ್ ಪಡೆಯುವುದಕ್ಕಿಂತ ನೆಟಿಜನ್ಸ್ ಬಾಯಿಗೆ ಸಿಕ್ಕಿದ್ದೆ ಹೆಚ್ಚು. ಹೀಗಿರುವಾಗ ವಿವಾದದ ನಡುವೆಯು ನಿರ್ದೇಶಕ ಓಂ‌ ರಾವತ್ ಸಿನಿಮಾ ಕುರಿತಾಗಿ ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ.

‘ತಾನಾಜಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದ ನಿರ್ದೇಶಕ ಓಂ ರಾವತ್​ ‘ಆದಿಪುರುಷ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದರಿಂದ ಹೈಪ್​ ಹೆಚ್ಚಿತ್ತು. ಆದರೆ ಚಿತ್ರ ಬಿಡುಗಡೆ ಆದ ಬಳಿಕ ಪ್ರೇಕ್ಷಕರಿಗೆ ಭಾರಿ ನಿರಾಸೆ ಆಯಿತು. ಜೂನ್​ 16ರಂದು ಬಿಡುಗಡೆಯಾದ ‘ಆದಿಪುರುಷ್​’ ಸಿನಿಮಾ ಈಗಲೂ ಟ್ರೋಲ್​ ಕಾಟ ಎದುರಿಸುತ್ತಿದೆ. ಅಚ್ಚರಿ ಏನೆಂದರೆ, ಈ ಸಿನಿಮಾಗೆ ಸೀಕ್ವೆಲ್​ ಮಾಡುವ ಆಲೋಚನೆ ಕೂಡ ನಿರ್ದೇಶಕ ಓಂ ರಾವತ್​ ಅವರಿಗೆ ಇತ್ತು! ಆದರೆ ಅದಕ್ಕೆ ಪ್ರಭಾಸ್​ ಅವರು ಒಪ್ಪಿಕೊಂಡಿರಲಿಲ್ಲ. ಸಿನಿಮಾಗಳನ್ನು ಎರಡು ಪಾರ್ಟ್​​ನಲ್ಲಿ ಮಾಡುವ ಟ್ರೆಂಡ್​ ಜೋರಾಗಿದೆ. ‘ಬಾಹುಬಲಿ’, ‘ಕೆಜಿಎಫ್​’ ಮುಂತಾದ ಸಿನಿಮಾಗಳು ಈ ಸೂತ್ರ ಅನುಸರಿಸಿ ಭರ್ಜರಿ ಲಾಭ ಮಾಡಿಕೊಂಡವು. ‘ಪುಷ್ಟ’ ಸಿನಿಮಾಗೂ ಸೀಕ್ವೆಲ್​ ಮೂಡಿಬರುತ್ತಿದೆ. ಮೊದಲ ಪಾರ್ಟ್​ ಬಿಡುಗಡೆ ಆದ ಬಳಿಕ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಆದಿಪುರುಷ್​ 2’ ಸಿನಿಮಾವನ್ನು ಮಾಡಬೇಕು ಎಂದು ಓಂ ರಾವುತ್​ ಆಲೋಚಿಸಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.
‘ಆದಿಪುರುಷ್​’ ಸಿನಿಮಾತಂಡದವರು ರಾಮಾಯಣದ ಕಥೆಗೆ ಆಧುನಿಕ ಟಚ್​ ನೀಡಲು ಹೋಗಿ ಎಡವಿದರು. ಸೈಫ್​ ಅಲಿ ಖಾನ್​ ಮಾಡಿದ ರಾವಣನ ಪಾತ್ರ ನೋಡಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಆಂಜನೇಯನ ಪಾತ್ರದ ಸಂಭಾಷಣೆ ತೀರಾ ಕಳಪೆ ಆಗಿದೆ ಎಂಬ ಆಕ್ಷೇಪ ಕೂಡ ಎದುರಾಯಿತು. ಇದೆಲ್ಲದರ ಪರಿಣಾಮವಾಗಿ ಚಿತ್ರತಂಡಕ್ಕೆ ತೀವ್ರ ಮುಖಭಂಗ ಆಗಿದೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್