• February 7, 2022

ದೇವಿ ಧಾರಾವಾಹಿಗೆ ಹತ್ತರ ಹರೆಯ! ಸಂತಸ ವ್ಯಕ್ತಪಡಿಸಿದ ಪ್ರಥಮಾ ಪ್ರಸಾದ್

ದೇವಿ ಧಾರಾವಾಹಿಗೆ ಹತ್ತರ ಹರೆಯ! ಸಂತಸ ವ್ಯಕ್ತಪಡಿಸಿದ ಪ್ರಥಮಾ ಪ್ರಸಾದ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಿ ಧಾರಾವಾಹಿ ಪ್ರಸಾರವಾಗಿ ಈಗ ಹತ್ತು ವರ್ಷ. ದಶಕದ ಸಂಭ್ರಮದಲ್ಲಿರುವ ದೇವಿ ಧಾರಾವಾಹಿಯಲ್ಲಿ ನಟಿ ಪ್ರಥಮಾ ಪ್ರಸಾದ್ ದೇವಿಯ ಪಾತ್ರ ಮಾಡಿದ್ದರು. ಈಗ ಪ್ರಥಮಾ ಅವರು ಧಾರಾವಾಹಿಯಲ್ಲಿ ನಿರ್ವಹಿಸಿದ ವಿವಿಧ ಅವತಾರಗಳನ್ನು ವಿಡಿಯೋ ತುಣುಕು ಮೂಲಕ ಹಂಚಿಕೊಂಡಿದ್ದಾರೆ. ಇದರೊಂದಿಗೆ ನೋಟ್ ಅನ್ನು ಬರೆದುಕೊಂಡಿದ್ದಾರೆ.

“ದೇವಿ ಧಾರಾವಾಹಿಗೆ 10 ವರ್ಷಗಳು. ಇಂಡಸ್ಟ್ರಿಯಲ್ಲಿ ನನ್ನ ಸೆಕೆಂಡ್ ಪ್ರಾಜೆಕ್ಟ್. ಕೊಲ್ಲೂರು ಮೂಕಾಂಬಿಕೆಯ ಪಾತ್ರ ನಿರ್ವಹಿಸಲು ಆಶೀರ್ವಾದ ಪಡೆದಿದ್ದೆ. ಬದುಕಿನುದ್ದಕ್ಕೂ ನೆನಪಿಸಿಕೊಳ್ಳುವ ಪಾತ್ರ. ಈ ಉತ್ತಮ ಅವಕಾಶ ನೀಡಿದ್ದಕ್ಕೆ ಶ್ರುತಿ ನಾಯ್ಡು ಮೇಡಂ ಹಾಗೂ ರಮೇಶ್ ಇಂದಿರಾ ಸರ್ ಅವರಿಗೆ ಧನ್ಯವಾದಗಳು”ಎಂದಿದ್ದಾರೆ.

ಬೊಂಬೆಯಾಟವಯ್ಯಾ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಪ್ರಥಮಾ ಪ್ರಸಾದ್ ದೇವಿಯಾಗಿ ಕಾಣಿಸಿದ್ದೇ ಹೆಚ್ಚು. ದೇವಿ, ಮಹಾದೇವಿ, ಅಮ್ನೋರು ಧಾರಾವಾಹಿಗಳಲ್ಲಿ ದೇವಿ ಪಾತ್ರಕ್ಕೆ ಜೀವ ತುಂಬಿರುವ ಪ್ರಥಮಾ ಪ್ರಸಾದ್ ಗೆ ರಮ್ಯಾಕೃಷ್ಣನ್ ಅವರೇ ಸ್ಫೂರ್ತಿ. ” ಕಿರುತೆರೆಯಲ್ಲಿ ನಾನು ದೇವಿ ಪಾತ್ರದ ಮೂಲಕ ಮನೆ ಮಾತಾಗಿದ್ದೇನೆ ಎಂದರೆ ಅದಕ್ಕೆ ಒಂದರ್ಥದಲ್ಲಿ ರಮ್ಯಾಕೃಷ್ಣನ್ ಅವರೇ ಸ್ಫೂರ್ತಿ ಎನ್ನಬಹುದು. ರಮ್ಯಾಕೃಷ್ಣನ್ ಅವರ ದೇವಿ ಪಾತ್ರವನ್ನು ನೋಡುತ್ತಾ ಬೆಳೆದ ನಾನು ಇಂದು ಅದೇ ಪ್ರೇರಣೆಯಿಂದ ದೇವಿಯಾಗಿ ನಟಿಸಲು ಸಾಧ್ಯವಾಯಿತು” ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಪ್ರಥಮಾ ಪ್ರಸಾದ್.