• July 14, 2023

ಸಿನಿಮಾ ಅರ್ಧದಲ್ಲಿ ಕೈ ಬಿಟ್ಟು ರಶ್ಮಿಕಾ ಎಸ್ಕೇಪ್, ಹೊಸ ನಾಯಾಕಿಗಾಗಿ ಸಿನಿಮಾ ತಂಡ ಹುಡುಕಾಟ.

ಸಿನಿಮಾ ಅರ್ಧದಲ್ಲಿ ಕೈ ಬಿಟ್ಟು ರಶ್ಮಿಕಾ ಎಸ್ಕೇಪ್, ಹೊಸ ನಾಯಾಕಿಗಾಗಿ ಸಿನಿಮಾ ತಂಡ ಹುಡುಕಾಟ.

ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎನ್ನುವುದು ಸಿನಿ ಪ್ರೇಕ್ಷಕರ ವಿಚಾರ, ಅದರಂತೆ ಸಾಕಷ್ಟು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯಸಿಯಾಗಿರುವ ನಟ ರಶ್ಮಿಕಾ ಮಂದಣ್ಣ ಸಿನಿಮಾದಿಂದ ರಶ್ಮಿಕಾ ಹೊರ ನಡೆದಿದ್ದಾರೆ. ಈ ವಿಚಾರವನ್ನು ಯಾರೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.

ನಟಿ ರಶ್ಮಿಕಾ ಮಂದಣ್ಣರ ಡಿಮ್ಯಾಂಡ್ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದು ಕಡಿಮೆಯಂತು ಆಗುತ್ತಿಲ್ಲ. ಸಾಕಷ್ಟು ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಞ ಹೇಳದೆ ಕೇಳದೆ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ವೆಂಕಿ ಕುಡುಮುಲ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಅವರು ನಿತಿನ್​ಗೆ ಜೊತೆಯಾಗಿ ನಟಿಸಬೇಕಿತ್ತು. ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಈ ಜಾಗಕ್ಕೆ ದಕ್ಷಿಣದ ಖ್ಯಾತ ನಟಿಯ ಎಂಟ್ರಿ ಆಗಿದೆ ಅನ್ನೋದು ವಿಶೇಷ. ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಈ ಆಫರ್ ನೀಡಲಾಗಿದೆ ಎನ್ನುವ ಸುದ್ದಿ ಹರಿದಾಡಿದೆ. ವೆಂಕಿ ಅವರು ಕೃತಿ ಅವರನ್ನು ಭೇಟಿ ಮಾಡಿದ್ದು, ಶೀಘ್ರವೇ ಎಲ್ಲವೂ ಫೈನಲ್ ಆಗಲಿದೆ ಎನ್ನಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಅವರು ಟಾಲಿವುಡ್​​ಗೆ ಎಂಟ್ರಿಕೊಟ್ಟಿದ್ದು ‘ಚಲೋ’- “ಭೀಷ್ಮ” ಸಿನಿಮಾ ಮೂಲಕ. ಈ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶನ ಮಾಡಿದ್ದರು.ನಿತಿನ್, ವೆಂಕಿ ಹಾಗೂ ರಶ್ಮಿಕಾ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬರುವುದರಲ್ಲಿತ್ತು. #VNRTrio ಎಂದು ಈ ಚಿತ್ರಕ್ಕೆ ತಾತ್ಕಾಲಿಕ ಶೀರ್ಷಿಕೆ ಇಡಲಾಗಿತ್ತು. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬಂದಿತ್ತು.

ಒಂದೇ ಬಾರಿಗೆ ಇಷ್ಟು ಚಿತ್ರಗಳಿಗೆ ಡೇಟ್ಸ್ ಅಡ್ಜೆಸ್ಟ್ ಮಾಡಲು ಸಾಧ್ಯವಾಗದ ಕಾರಣ ರಶ್ಮಿಕಾ ನಿರ್ಮಾಪಕರ ಬಳಿ ಮಾತನಾಡಿ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್