• July 14, 2023

ಕೆಜಿಎಫ್ 2 ದಾಖಲೆ‌ ಮುರಿದ ಸಲಾರ್ ಓಟಿಟಿಯಲ್ಲು ಸಲಾರ್ ನಂಬರ್ -1

ಕೆಜಿಎಫ್ 2 ದಾಖಲೆ‌ ಮುರಿದ ಸಲಾರ್  ಓಟಿಟಿಯಲ್ಲು   ಸಲಾರ್ ನಂಬರ್ -1

ಟೀಸರ್‌ ಮೂಲಕ ಸಖತ್ ಸುದ್ದಿಯಾಗಿದ್ದ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಈಗ ಓಟಿಟಿ ಹಕ್ಕು ಮಾರಾಟದ ವಿಚಾರದಲ್ಲು ಸಖತ್ ಸೌಂಡ್ ಮಾಡುತ್ತಿದೆ.ಜುಲೈ 6 ರಂದು ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 24 ಗಂಟೆಯೊಳಗೆ 83 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ.ದೊಡ್ಡ ಮೊತ್ತಕ್ಕೆ ಸಲಾರ್‌ ಚಿತ್ರದ ಒಟಿಟಿ ಹಕ್ಕುಗಳು ಮಾರಾಟವಾಗಿವೆ ಎಂಬ ವಿಚಾರ ಕೇಳಿಬರುತ್ತಿದೆ.

ಹೊಂಬಾಳೆ ಫಿಲಂಸ್‌ ನಿರ್ಮಾಣದ ಸಿನಿಮಾ ಎಂಬುದು ಒಂದೆಡೆಯಾದರೆ, ಪ್ರಶಾಂತ್‌ ನೀಲ್‌ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೂ ಚಿತ್ರ ನಿರೀಕ್ಷೆಯನ್ನು ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಟೀಸರ್‌ ಸಹ ಹೆಚ್ಚು ಜನರಿಂದ ನೋಡಲ್ಪಟ್ಟಿದೆ. ಹೀಗೆ ಹಲವು ಕಾರಣಕ್ಕೆ ಸುದ್ದಿಯಲ್ಲಿರುವ ಈ ಸಿನಿಮಾ ಇದೀಗ ಒಟಿಟಿ ವಿಚಾರದಲ್ಲಿಯೂ ದೊಡ್ಡ ಮೊತ್ತವನ್ನೇ ಸ್ವೀಕರಿಸಿದೆ.

ಸದ್ಯದ ಟ್ರೆಂಡ್‌ ಮತ್ತು ಕ್ರೇಜ್‌ ನೋಡಿದರೆ ಸಲಾರ್‌ ಸಿನಿಮಾ ಮೊದಲ ದಿನವೇ ಬಿಗ್‌ ಓಪನಿಂಗ್‌ ಪಡೆದುಕೊಳ್ಳಲಿದೆ ಎನ್ನಲಾಗುತ್ತಿದೆ. ಸಾವಿರಾರು ಸ್ಕ್ರೀನ್‌ ಮೇಲೆ ಸಲಾರ್‌ ಅಬ್ಬರಿಸಲಿದೆ. ಈ ಹಿನ್ನೆಲೆಯಲ್ಲಿ ಹೊಂಬಾಳೆಯ ಈ ಹಿಂದಿನ ಬೇರಾವ ಸಿನಿಮಾ ಮಾಡದ ದಾಖಲೆಯನ್ನು ಸಲಾರ್‌ ಮಾಡಲಿದೆ ಎಂದೇ ಹೇಳಲಾಗುತ್ತಿದೆ. ಕೆಜಿಎಫ್‌ 2 ಸಿನಿಮಾ 1200 ಪ್ಲಸ್‌ ಕೋಟಿ ಕಲೆಕ್ಷನ್‌ ಮಾಡಿತ್ತು. ಆ ಚಿತ್ರದ ದಾಖಲೆಯನ್ನು ಸಲಾರ್‌ ಮುರಿದಿದೆ ಎಂಬ ಟಾಕ್‌ ಕೇಳಿಬರುತ್ತಿದೆ.

ಸಲಾರ್ ಚಿತ್ರ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಡಿಜಿಟಲ್ ರೈಟ್ಸ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಒಟಿಟಿ ದೈತ್ಯ ಅಮೆಜಾನ್‌ ಪ್ರೈಂ ಸಲಾರ್ ಒಟಿಟಿ ಡೀಲ್ ಮುಗಿಸಿಕೊಂಡಿದೆ. ಸಲಾರ್‌ನ ಸೌತ್‌ನ ಎಲ್ಲ ಭಾಷೆ ಮತ್ತು ಹಿಂದಿ ಭಾಷೆಯ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಅದೂ ಬರೋಬ್ಬರು 200 ಕೋಟಿ ರೂಪಾಯಿಗೆ!

ಹೊಂಬಾಳೆ ಸಂಸ್ಥೆ ಲಾಭದ ಕಡೆ ಹೊರಳುತ್ತಿದ್ದಾರೆ. ಚಿತ್ರಕ್ಕೆ ನಿರ್ಮಾಪಕರು ಹಾಕಿದ ಬಂಡವಾಳದ ಶೇ.80ರಿಂದ 90ರಷ್ಟನ್ನು ಒಟಿಟಿ ರೈಟ್ಸ್ ಮೂಲಕ ವಸೂಲಿಯಾಗಿದೆ ಎಂದು ವರದಿಯಾಗಿದೆ. ಇನ್ನುಳಿದಂತೆ ಸಿನಿಮಾ ಬಿಡುಗಡೆ ಬಳಿಕ ಬರುವ ಚಿತ್ರಮಂದಿರದ ಕಲೆಕ್ಷನ್‌ ಮತ್ತು ಸ್ಯಾಟಲೈಟ್‌ ಹಕ್ಕುಗಳಿಂದಲೂ ಬರುವ ಮೊತ್ತವೂ ಹೆಚ್ಚುವರಿ ಲಾಭವೇ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್