• July 11, 2023

‘ಹಾಸ್ಟೆಲ್ ಹುಡುಗರು’ ಟೀಸರ್ ಲಾಂಚ್ ಬಿಡುಗಡೆ‌ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್, ರಿಷಬ್,ರಕ್ಷೀತ್,ದೃವ ಸರ್ಜಾ.

‘ಹಾಸ್ಟೆಲ್ ಹುಡುಗರು’ ಟೀಸರ್ ಲಾಂಚ್   ಬಿಡುಗಡೆ‌ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್, ರಿಷಬ್,ರಕ್ಷೀತ್,ದೃವ ಸರ್ಜಾ.

ಪ್ರೋಮೋ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಟ್ರೇಲರನ್ನ ಅಶ್ವಿನಿ ಪುನೀತ್ ರಾಜ್‍ಕುಮಾರ್,ರಿಷಬ್ ಶೆಟ್ಟಿ, ರಕ್ಷೀತ್ ಶೆಟ್ಟಿ, ಧೃವ ಸರ್ಜಾ ರಿಲೀಸ್ ಮಾಡಿ ತಂಡಕ್ಕೆ ಹಾರೈಸಿದರು.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಎಂಬ ಭಿನ್ನ ಟೈಟಲ್ ಮೂಲಕ ಸಿನಿಮಾ ತಂಡ ಗಮನ ಸೆಳೆಯುತ್ತಿದೆ. ಈಗಾಗಲೇ ಹಾಸ್ಟೆಲ್ ಹುಡುಗರು ಊರಿಗೆಲ್ಲಾ ಫೇಮಸ್ ಆಗಿದ್ದಾರೆ. ಅಲ್ಲದೆ ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ದಿಗಂತ್ ಅಂತಹ ಕನ್ನಡ ತಾರೆಯರು ನಟಿಸಿದ್ದಾರೆ. ಅಪ್ಪು, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್, ರಮ್ಯಾ, ಸೂಪರ್‌ಸ್ಟಾರ್‌ಗಳೆಲ್ಲರೂ ಹೊಸಬರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ನಿತೀನ್ ನಿರ್ದೇಶಕ- ಈ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇನಾಗುರೇಟ್ ಮಾಡಿದ್ದೇ ಅಪ್ಪು ಸರ್. ಸುಮಾರು 2ವರ್ಷಗಳ ಕಾಲ ಸಮಯ ಕಳೆದಿದ್ದೇವೆ ಈ ಸಿನಿಮಾ ನಿರ್ಮಾಕ್ಕಾಗಿ.ಸುಮಾರು ಸಾವಿರಕ್ಕು ಹೆಚ್ಚು ಜನ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಹೊಸ ತಂಡಕ್ಕೆ ಸಾಕಷ್ಟು ಸಹಾತ ಮಾಡಿದಂತಹ ಅಶ್ವೀನಿ ಪುನೀತ್ ರಾಜ್‍ಕುಮಾರ್, ರಕ್ಷೀತ್ ಶೆಟ್ಟಿ, ರಿಷಬ್ ಶೆಟ್ಟಿ,ದೃವ ಸರ್ಜಾ ಸರ್ ಗೆ ಧನ್ಯವಾದ ತಿಳಿಸುತ್ತೇನೆ.

ಪ್ರಮೋದ್ ಶೆಟ್ಟಿ- ಈ ಸಿನಿಮಾ ತಂಡದಲ್ಲಿ ಅರ್ಧಕ್ಕೆ ಅರ್ಧ ಜನ ನನ್ನ ರಂಗಸೌರಭ ತಂಡದವರೆ ಇದ್ದಾರೆ. ಕಿರೀಕ್ ಪಾರ್ಟಿ ಸಿನಿಮಾ ಹೇಗೆ ಹಿಟ್ ಆಯ್ತೋ ಹಾಗೆ ಈ ಸಿನಿಮಾ ಕೂಡ ಹಿಟ್ ಆಗಲಿದೆ.

ರಕ್ಷೀತ್ ಶೆಟ್ಟಿ- ಅಪ್ಪು ಸರ್ ಏನೆ ಶುರು ಮಾಡಿದ್ರು ಅದು ಅಧ್ಭುತವಾದ ರಿಸಲ್ಟ್ ಕೊಡುತ್ತೆ. ಈ ಸಿನಿಮಾಗೆ ಮೊದಲು ವಿಶ್ ಮಾಡಿದ್ದೇ ಅಪ್ಪು ಸರ್.ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಸಾಕಷ್ಟು ವಿಷಯಗಳು ಜನರಿಗೆ ಹಿಡಿಸುತ್ತೆ. ಚಿಕ್ಕ ಬಜೆಟ್ ನಲ್ಲಿ ಸಿನಿಮಾ ಸಖತ್ ಮೂಡಿಬಂದಿದೆ.ಲೂಸಿಯಾ ಸಿನಿಮಾದಲ್ಲಿ ಕೆಲಸ ಮಾಡಿದವರು ಈ ಸಿನಿಮಾದಲ್ಲಿ ಇದ್ದಾರೆ‌. ಇವರೆಲ್ಲ ಕನ್ನಡ ಇಂಡಸ್ಟ್ರೀಯ ಫ್ಯೂಚರ್ ಸ್ಟಾರ್ ಗಳು.ಸಿನಿಮಾದಲ್ಲಿ ಸಾಕಷ್ಟು ತರಲೆ ಡೈಲಾಗ್ ಇವೆ.ಇಡೀ ಪ್ಯಾಮೀಲಿ ಕೂತು ನೋಡುವಂತಹ ಸಿನಿಮಾ ಇದಾಗಿದೆ.

ರಿಷಬ್ ಶೆಟ್ಟಿ-
ಹಾಸ್ಟೆಲ್ ದಿನವನ್ನ ನೆನಪಿಸುವ ಸಿನಿಮಾ ಇದು. ನನ್ನ ಶಿಷ್ಯರೆ ಮಾಡಿರುವಂತಹ ಸಿನಿಮಾ ಹಾಸ್ಟೆಲ್ ಹುಡುಗರು. ಹರಿಕಥೆ ಗಿರಿಕಥೆ ಸಿನಿಮಾ ಮಾಡುವಾಗ ನನಗೆ ಗೆಸ್ಟ್ ರೋಲ್ ಗೆ ಕರೆ ಬಂದಿತ್ತು. ತುಂಬಾ ಅಧ್ಭುತವಾದ ತಂಡ ಇದು.ಕಾಂತಾರ ಸಿನಿಮಾ ಶುರುವಾಗುವುದಕ್ಕು ಮುಂಚೆ ಶುರುವಾದ ಸಿನಿಮಾ ಹಾಸ್ಟೆಲ್ ಹುಡುಗರು.ಅತೀ ಹೆಚ್ಚು ಪ್ರೋಮೋ ಇರುವ ಏಕೈಕ ಸಿನಿಮಾ. ಹಾಸ್ಟೆಲ್ ಲೈಫನ್ನ ಮತ್ತೆ ಮರುಕಳಿಸುವ ಸಿನಿಮಾ. ನಾನು ತುಂಬಾ ಇಷ್ಟಪಟ್ಟು ಈ ಸಿನಿಮಾದಲ್ಲಿ ನಟಿಸಿದ್ದೇನೆ.ಸಿನಿಮಾ ಸಾಕಷ್ಟು ಮಟ್ಟದಲ್ಲಿ ದೊಡ್ಡ ಹೆಸರು ಮಾಡುತ್ತೆ.

ದೃವ ಸರ್ಜಾ- ಈ ಸಿನಿಮಾದ ಟ್ರೇಲರ್ ‌ನೋಡಿದ ಮೇಲೆ ನನಗೆ ನೆನಪಿಗೆ ಬಂದದ್ದು ನಮ್ ಅಣ್ಣ ನಾನು ನಮ್ ಅಣ್ ಇಬ್ಬರು -6-7 ವರ್ಷಗಳ ಕಾಲ ಹಾಸ್ಟೆಲ್ ಲಿ ಇದ್ದದ್ದು. ಸಾಕಷ್ಟು ಗೆಳೆಯರನ್ನ ಮಿಸ್ ಮಾಡ್ಕೊಳ್ತಾ ಇದೀನಿ. ಆ ಒಂದು ಗೆಳೆತನ ನೆನಪಾಗ್ತಿದೆ.ಹಾಸ್ಟೆಲ್ ನಲ್ಲಿ ಸಾಕಷ್ಟು ತರ್ಲೆ ಮಾಡಿರ್ತೇವೆ‌, ಒಟ್ನಲ್ಲಿ ಈ ಸಿನಿಮಾಗೆ ಒಳ್ಳೆಯದಾಗಲಿ.

ಸಿನಿ ದುನಿಯಾದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಮೋಡಿ ಮಾಡುತ್ತಲೇಯಿದೆ. ಚಿತ್ರಕ್ಕೆ ರಮ್ಯಾ, ದಿಗಂತ್ ಸಾಥ್ ನೀಡಿದ್ದಾರೆ. ದಿಗಂತ್ ಟೀಸರ್ ಮೂಲಕ ಗಮನ ಸೆಳೆದಿದ್ದಾರೆ.

ಹಾಸ್ಟೆಲ್ ಹುಡುಗರ ಜೊತೆ ದೂದ್ ಪೇಡಾ ದಿಗಂತ್ ಸಾಥ್ ನೀಡಿದ್ದು, ಕಪ್ಪು ಕಪ್ಪಾಗಿರೋ ಸಿನಿಮಾ ಬಗ್ಗೆ ಸಖತ್ ಡೈಲಾಗ್ ಬಿಟ್ಟಿದ್ದಾರೆ. ಆದರೆ ದಿಗಂತ್ ರೋಲ್ ಬಗ್ಗೆ ಹಿಂಟ್ ಬಿಟ್ಟುಕೊಟ್ಟಿಲ್ಲ. ದಿಗಂತ್ ಲುಕ್ ಮ್ಯಾನರಿಸಂ, ಡೈಲಾಗ್ ಡಿಲೆವರಿ ಎಲ್ಲವೂ ಮಜವಾಗಿದೆ. ಈಗೆಲ್ಲ ಕಪ್ಪು ಕಪ್ಪಾಗಿರೋದೇ ಟ್ರೆಂಡ್.. ಆಗಲೇ ಜನ ಥಿಯೇಟರ್‌ಗೆ ಬರೋದು ಅಂತ ಹೇಳಿರೋ ಡೈಲಾಗ್ ಸಿನಿಪ್ರಿಯರಿಗೆ ಖುಷಿ ಕೊಟ್ಟಿದೆ.

ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ. ವರುಣ್ ಕುಮಾರ್ ಗೌಡ , ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಪ್ರತಿ ಬಾರಿ ಯುನಿಕ್ ಕಾನ್ಸೆಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರ ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್