• June 27, 2023

ಸ್ಪೈ ಚಿತ್ರದ ಟೀಸರ್ ಲಾಂಚ್, ಸುಭಾಸ್ ಚಂದ್ರ ಬೋಸ್ ನ ಸಾವಿನ ಸೀಕ್ರೆಟ್ ಈ ಸಿನಿಮಾದಲ್ಲಿದೆ- ನಾಯಕ ನಿಖಿಲ್ ಸಿದ್ದಾರ್ಥ್…!

ಸ್ಪೈ ಚಿತ್ರದ ಟೀಸರ್ ಲಾಂಚ್, ಸುಭಾಸ್ ಚಂದ್ರ ಬೋಸ್ ನ ಸಾವಿನ ಸೀಕ್ರೆಟ್ ಈ ಸಿನಿಮಾದಲ್ಲಿದೆ- ನಾಯಕ ನಿಖಿಲ್ ಸಿದ್ದಾರ್ಥ್…!

ಸಾಕಷ್ಡು ಕುತೂಹಲ ಮೂಡಿಸಿದ್ದ ‘ಸ್ಪೈ’ ಚಿತ್ರತಂಡ ಕೊನೆಗು ಕನ್ನಡದಲ್ಲಿ ಟೀಸರ್ ಲಾಂಚ್ ಮಾಡಿದೆ. ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತಾದ ಕೆಲ ಸತ್ಯ ಘಟನೆಗಳನ್ನ ಟೀಸರ್ ನಲ್ಲಿ ತೋರಿಸಲಾಗಿದೆ. ಆದರೆ‌ ಈ ಸತ್ಯ ಘಟನೆಗಳು ಪ್ರೇಕ್ಷಕನಿಗೆ ಹೇಗೆ ಹಿಡಿಸಲಿದೆ ಅಂತಾ ಜೂನ್ 29ರ ಬಳಿಕ ಗೊತ್ತಾಗಲಿದೆ.

ಈ ಸಿನಿಮಾದಲ್ಲಿ ನಟ ನಿಖಿಲ್‌, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ‌ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ಕಾರ್ತಿಕೇಯ-2 ಹಾಗೂ 18 ಪೇಜಸ್‌ ಸಕ್ಸಸ್‌ ಬಳಿಕ ‘ಸ್ಪೈ’ ಸಿನಿಮಾದಲ್ಲಿ ನಿಖಿಲ್ ನಟಿಸಿದ್ದಾರೆ.ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಸ್ಪೈ ಸಿನಿಮಾಗೆ ಖ್ಯಾತ ನಿರ್ದೇಶಕ/ಸಂಕಲನಕಾರರಾಗಿ ಗ್ಯಾರಿ ಬಿಹೆಚ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಎವರು ಮತ್ತು ಹಿಟ್‌ ಸಿನಿಮಾಗಳ ನಿರ್ಮಾಪಕ ಕೆ ರಾಜಶೇಖರ್‌ ರೆಡ್ಡಿ, ಚರಣ್‌ ರಾಜ್‌ ಉಪ್ಪಲಪತಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಸ್ಪೈ ಚಿತ್ರದಲ್ಲಿ ಸನ್ಯಾ ಠಾಕೂರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅತಿಥಿ ಪಾತ್ರದಲ್ಲಿ ಬಾಹುಬಲಿ ಬಲ್ಲಾಳದೇವ ಖ್ಯಾತಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಅಭಿನವ್‌ ಗೋಮತಮ್, ಮಕರಂದ್‌ ದೇಶಪಾಂಡೆ, ನಿತಿನ್‌ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್‌, ಸೋನಿಯಾ ನರೇಶ್‌ ಮತ್ತು ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಕಾರ್ತಿಕೇಯ, ಕಾರ್ತಿಕೇಯ-2 ನಂತಹ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿಖಿಲ್ ಸಿದ್ಧಾರ್ಥ್ ಹೊಸ ಸಿನಿಮಾ ಸ್ಪೈ ಮೇಲೆ ಸಿನಿಮಾಭಿಮಾನಿಗಳಿಗೆ ಇನ್ನಷ್ಟು ನಿರೀಕ್ಷೆ ಹೆಚ್ಚಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್