• June 24, 2023

“ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್”ಥಿಯೇಟ್ರಿಕಲ್ ಹಕ್ಕು ಕೆ ಆರ್ ಜಿ ಪಾಲು..!

“ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್”ಥಿಯೇಟ್ರಿಕಲ್ ಹಕ್ಕು ಕೆ ಆರ್ ಜಿ ಪಾಲು..!

ವೀಕ್ಷಕರೆ ನೀವೆಲ್ಲ‌ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ-777 ಸಿನಿಮಾ‌‌ ನೋಡಿದ್ದೀರ ಅದರಲ್ಲಿ ಸಾಕು ಪ್ರಾಣಿಯಾದ ನಾಯಿಗೆ ಮನುಷ್ಯನ ಮೇಲೆ ಎಷ್ಟೊಂದು ನಿಯತ್ತು ಇರುತ್ತದೆ, ಅವುಗಳಿಗು ಮನಸ್ಸಿದೆ, ತನ್ನನ್ನ ಸಾಕಿ ಸಲುಹಿದವರನ್ನ ಆ ಪ್ರಾಣಿ ಹೇಗೆ ಖಾಳಜಿ ಮಾಡುತ್ತದೆ ಎಂಬುದನ್ನ ಆ ಸಿನಿಮಾದಲ್ಲಿ ನೋಡಿದ್ದೇವೆ ಅದೇ ರೀತಿ ಮಲೆಯಾಳಂ ನಲ್ಲಿಯೂ ಕೂಡ ಒಂದು ಸಿನಿಮಾ ತಯಾರಾಗಿದೆ.

ನಿರ್ದೇಶಕ ದೇವನ್ ಡೈರೆಕ್ಷನ್ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ. “ವಾಲಟ್ಟೆ” ಸಿನಿಮಾದ ಕಥೆಯು ಸಾಕು ಪ್ರಾಣಿಯಾದ ನಾಯಿಗಳ ಬಗ್ಗೆ ಸಾಗುತ್ತ ಹೋಗುತ್ತದೆ ಒಂದು ಪ್ರಾಣಿ ಹೇಗೆಲ್ಲಾ ಮನುಷ್ಯನ ಮಾತನ್ನ ಕೇಳುತ್ತದೆ, ಹೇಗೆಲ್ಲ ಪ್ರತಿಕ್ರಿಯೆ ಮಾಡುತ್ತೆ,ಕೆಲವೊಂದು ಸಾಹಸಮಯ ದೃಶ್ಯಗಳನ್ನು ನಾಯಿ ಹೇಗೆ ಮಾಡುತ್ತದೆ,ಮನುಷ್ಯನ ಹೃದಯಕ್ಕೆ ಅದು ಎಷ್ಟು ಸನಿಹಾ ಎಂಬುದನ್ನ ಈ ಸಿನಿಮಾದಲ್ಲಿ ಕಾಣಬಹುದು. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಕ್ಯಾನೈನ್ ಮತ್ತು ಇತರ ಸಾಕುಪ್ರಾಣಿಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರೋ ಸಿನೆಮಾ. ನೋಡುಗರ ಮನಸೆಳೆಯುವ ತಾಜಾ ದೃಶ್ಯಗಳಲ್ಲದೇ, ಪ್ರೀತಿ, ಕಾಮಿಡಿ ಹಾಗೂ ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿದೆ. ಇನ್ನೊಂದು ವಿಶೇಷ ಸಂಗತಿ ಎಂದರೆ ಮೊಟ್ಟ ಮೊದಲ ಬಾರಿಗೆ ಮಲಯಾಳಂ ಖ್ಯಾತ ನಟರಾದ ಸೌಬಿನ್ ಶಾಹಿರ್,ಸನ್ನಿ ವೇಯ್ನ್,ಕುರುಪ್ ,ರೋಷನ್ ಮ್ಯಾಥೂ,ಇಂದ್ರನ್ಸ್ ಮುಂತಾದ ತಾರಾಬಳಗ ನಾಯಿಯ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

ಕೆಆರ್‌ಜಿ ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ
ಈ ಚಿತ್ರದ ಹಕ್ಕು ಪಡೆದಿದ್ದು,

ದಿಲ್ ರಾಜು ಅವರು ತೆಲುಗಿನಲ್ಲಿ, ಅನಿಲ್ ತದಣಿ ಹಿಂದಿಯಲ್ಲಿ ಹಂಚಿಕೆಯ ಜವಾಬ್ದಾರಿಯನ್ನು ಹೊತ್ತಿದ್ದು, ಓವರ್ ಸೀಸ್ ಡಿಸ್ಟ್ರಿಬ್ಯುಶನ್ ಅನ್ನು ಹೋಮ್ ಸ್ಕ್ರೀನ್ ಎಂಟರ್ಟೇನ್ಮೆಂಟ್ ವಹಿಸಿಕೊಂಡಿದೆ. ವಾಲಟ್ಟಿಯನ್ನು ವಿಜಯ್ ಬಾಬು ಪ್ರಸ್ತುತಪಡಿಸಿದ್ದು ಫ್ರೈಡೇ ಫಿಲ್ಮ್ ಹೌಸ್ ನಿರ್ಮಿಸಿದ್ದಾರೆ. ಚಿತ್ರವು ಜುಲೈ 14 ರಂದು ಮಲಯಾಳಂ,ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಪ್ರಪಂಚದಾದ್ಯಂತ ಬಿಡುಗಡೆಗೊಳ್ಳುತ್ತಿದೆ.