• June 15, 2023

ಲೀಕಾಯ್ತು ತಮನ್ನಾಳ ಬೆಡ್ ರೂಂ ಸೀನ್;ಫ್ಯಾನ್ಸ್ ಫುಲ್ ಗರಂ…!

ಲೀಕಾಯ್ತು ತಮನ್ನಾಳ ಬೆಡ್ ರೂಂ ಸೀನ್;ಫ್ಯಾನ್ಸ್ ಫುಲ್ ಗರಂ…!

2016ರಲ್ಲಿ ಸ್ಕ್ರೀನ್‌ ಮೇಲೆ ಲಿಪ್‌ಲಾಕ್‌ ಸಹ ಮಾಡಲ್ಲ ಎಂದು ಹೇಳಿದ್ದ ಮಿಲ್ಕಿ ಬ್ಯೂಟಿ ತಮನ್ನಾಳ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲೀಗ ವೈರಲ್‌ ಆಗುತ್ತಿವೆ.

ಸೌತ್‌ ಸುಂದರಿ, ಮಿಲ್ಕಿ ಬ್ಯೂಟಿ ತಮನ್ನಾ ಕಳೆದ ಒಂದೂವರೆ ದಶಕದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ನಟಿ, ಸೌತ್‌ನ ಬಹುತೇಕ ಎಲ್ಲ ಸ್ಟಾರ್‌ಗಳ ಜತೆಗೆ ನಟಿಸಿ ಅಭಿಮಾನಿ ವಲಯದಲ್ಲಿಯೂ ಎಲ್ಲರ ಹಾಟ್‌ ಫೇವರಿಟ್‌ ಈ ನಟಿ. ನಟನೆ ಮತ್ತು ಸೌಂದರ್ಯದ ಮೂಲಕವೇ ಬಾಲಿವುಡ್‌ನಲ್ಲಿಯೂ ಚಾನ್ಸ್‌ ಗಿಟ್ಟಿಸಿಕೊಂಡು, ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡು, ಹಲವು ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿರುವ ನಟಿ.

ಸೋಷಿಯಲ್‌ ಮೀಡಿಯಾದಲ್ಲಿ ಮತ್ತಷ್ಟು ಮಗದಷ್ಟು ಸುದ್ದಿಯಲ್ಲಿದ್ದಾರೆ. ಹೌದು ರಾತ್ರೋ ರಾತ್ರಿ ನಟಿ ತಮನ್ನಾ ಭಾಟಿಯಾ ಅವರ ಒಂದಷ್ಟು ಹಸಿ ಬಿಸಿ ದೃಶ್ಯಗಳು ವೈರಲ್‌ ಆಗಿವೆ. ಅಭಿಮಾನಿ ವಲಯದಿಂದಲೂ ಇದು ತೀವ್ರ ಮುಜುಗರಕ್ಕೀಡು ಮಾಡಿದೆ. ಬೆಡ್‌ ರೂಮ್‌ ಸೀನ್‌ಗಳು, ಕಿಸ್ಸಿಂಗ್‌ ಸೀನ್‌ಗಳ ವಿಡಿಯೋ ತುಣುಕು ಮತ್ತು ಬೋಲ್ಡ್‌ ಅವತಾರದ ಫೋಟೋಗಳು ಹೊರಬಿದ್ದಿವೆ.

ಅಭಿಮಾನಿ ವಲಯ ಗರಂ

ನಟಿ ತಮನ್ನಾ ಸಿನಿಮಾ ಉದ್ಯಮದಲ್ಲಿ ತಮ್ಮದೇ ಆದ ಒಂದು ಸಿಸ್ಟಮ್‌ ಪಾಲಿಸುತ್ತ ಬಂದವರು. ಲಿಪ್‌ ಲಾಕ್‌ಗೂ ನಾನು ಅನುಮತಿ ನೀಡುವುದಿಲ್ಲ, ಆ ರೀತಿಯ ಯಾವುದೇ ದೃಶ್ಯಗಳಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು 2016ರಲ್ಲಿಯೇ ಹೇಳಿಕೊಂಡು ಅದನ್ನೇ ಮುಂದುವರಿಸಿಕೊಂಡು ಬಂದಿದ್ದರು. ಇದೀಗ ತಮನ್ನಾ ಅವರ ಹೊಸ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿವೆ. ಬೋಲ್ಡ್‌ ಸೀನ್‌ಗಳ ಮೂಲಕ ಎದುರಾಗಿ ಅಚ್ಚರಿ ಮೂಡಿಸಿದ್ದಾರೆ.

ಜೀ ಕರ್ದಾ ಚಿತ್ರದ ಹಸಿ ಬಿಸಿ ತುಣುಕು

ಈ ಸಿರೀಸ್‌ನಲ್ಲಿ ತಮನ್ನಾ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಈ ಹಿಂದೆ ಜೀ ಕರ್ದಾ ವೆಬ್‌ ಸರಣಿಯ ಟ್ರೇಲರ್‌ನಲ್ಲಿ ಈ ರೀತಿಯ ದೃಶ್ಯಗಳು ಕಂಡಿರಲಿಲ್ಲ. ಇದೀಗ ಸಿರೀಸ್‌ ರಿಲೀಸ್‌ ಆಗುತ್ತಿದ್ದಂತೆ, ತಮನ್ನಾ ನಯಾ ಅವತಾರ ಹೊರ ಬಿದ್ದಿದೆ.ಅರುಣಿಮಾ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿರುವ ರೊಮ್ಯಾನ್ಸ್‌ ಡ್ರಾಮಾ ಶೈಲಿಯ ಜೀ ಕರ್ದಾ ವೆಬ್‌ ಸೀರಿಸ್‌ನಲ್ಲಿ ಒಟ್ಟು 8 ಏಪಿಸೋಡ್‌ಗಳಿವೆ. ತಮನ್ನಾ ಭಾಟಿಯಾ, ಸುಹಾಲಿ ನಾಯರ್‌, ಆಶಿಮ್‌ ಗುಲಾಟಿ, ಆನ್ಯಾ ಸಿಂಗ್‌, ಹುಸೇನ್‌ ದಲಾಲ್‌ ಸೇರಿ ಹಲವರು ನಟಿಸಿದ್ದಾರೆ.

.ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್